ಹುಕ್ಕೇರಿ :-ತಾಲೂಕ ಹಣಬರ (ಯಾದವ) ಸಂಘಟನೆ ವತಿಯಿಂದ ಇಂದು ಬೆಳಗ್ಗೆ 1 ಗಂಟೆ ಸುಮಾರಿಗೆ ಶ್ರೀ ಕೃಷ್ಣ ಜನ್ಮಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಶ್ರೀ ಕೃಷ್ಣ ಭಾವ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು.
ಕಾರ್ಯನಿರ್ವಕ ಅಧಿಕಾರಿಯಾದ ಟಿ ಆರ್ ಮಲ್ಲಾಡದ ಮತ್ತು ಶ್ರೀಮತಿ ಅನಿತಾ ಕೇಶಾಗೋಳ ಹಾಗೂ ಪ್ರೊಪೆಸರ ಅನಿಲ ಕಾಂಬಳೆ ಅವರು ಹಣಬರ ಸಮಾಜದ ಬಗ್ಗೆ ಹಲವು ವಿಷಯಗಳನ್ನು ತಿಳಿ ಹೇಳಿದ್ದರು ಶ್ರೀ ಕೃಷ್ಣ ಜನ್ಮಷ್ಟಮಿಯು ಯಾದವ ಸಮಾಜಕ್ಕೆ ಮಾತ್ರವಲ್ಲ ಇಡಿ ಜಗತ್ತಿನ ಸೃಷ್ಟಿಕೃತ ಶ್ರೀ ಕೃಷ್ಣ ಭಗವಾನವರು ಎಲ್ಲರು ಮುದ್ದಿನ ಶ್ರೀ ಕೃಷ್ಣ ಮತ್ತು ಪ್ರತಿ ಒಬ್ಬರು ಭಗವತ ಗೀತೆಯನ್ನು ಓದಲೇ ಬೇಕು ಎಂದು ಹೇಳಿದರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉತ್ತಮ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಪ್ರವಾಹ ಮತ್ತು ಅತಿವೃಷ್ಟಿ ಅನಾವೃಷ್ಟಿ ಶಿರಸ್ತೆದಾರ ರಾದ ಶ್ರೀಮತಿ ಅನಿತಾ ಕೆಸಾಗೋಳ, ಕೆಂಪಣ್ಣಾ ನಾಯಕ, ಶಿವಾನಂದ ಪಾಟೀಲ, ಸಾಗರ ಪಾಟೀಲ, ಶಿವಲಿಂಗ ಮುತ್ನಾಳಿ, ಬಸವರಾಜ ರಾಮನಕಟ್ಟಿ, ಸಂತೋಷ ಕಾಂಗಲೆ, ನಂದು ಪಾಟೀಲ, ಹಣಬರ ಸಮಾಜದ ಗಣ್ಯ ವ್ಯಕ್ತಿಗಳು ಮುಖಂಡರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಕ್ಕಳು ಉಪಸ್ಥಿತರಿದ್ದರು.
ವರದಿ:- ಶಿವಾಜಿ ಎನ್ ಬಾಲೆಶಗೋಳ