ನಿಪ್ಪಾಣಿ : ನಿಪ್ಪಾಣಿ ತಾಲೂಕಿನ ಕುರ್ಲಿ ವಿಭಾಗಗಳ ಕೊಗನೋಳ್ಳಿ ಕುರ್ಲಿ ನಾಗನೂರ ಭಾಗಗಳಲ್ಲಿ ಶ್ರಾವಣ ಮಾಸದ ನಿಮಿತ್ಯ ಶ್ರೀ ಅಂಬಿಕಾ ಮಂದಿರ ನಾಗನಾಥ ಮಂದಿರ ಮತ್ತು ಗಣೇಶ್ ಮಂದಿರಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರುಗಳ ವತಿಯಿಂದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸ್ವಸಾಯ ಸಂಘದ ಎಲ್ಲ ಸದಸ್ಯರು ಮಂದಿರದ ಗರ್ಭಗುಡಿ ಮತ್ತು ವಠಾರವನ್ನು ಸ್ವಚ್ಛತೆ ಮಾಡಿದರು ಕಾರ್ಯಕ್ರಮದಲ್ಲಿ ಭಾಗಿಯಾದ ವಲಯದ ಮೇಲ್ವಿಚಾರಕ ಅನಿಲ ದಾವನೆ ಮಾತನಾಡಿ ಧರ್ಮಸ್ಥಳ ದೇವಸ್ಥಾನವು ಕರ್ನಾಟಕ ರಾಜ್ಯದ ಸುಪ್ರಸಿದ್ಧ ದೇವಸ್ಥಾನವಾಗಿದ್ದು ಈ ಒಂದು ದೇವಸ್ಥಾನಕ್ಕೆ ಭಾರತದಲ್ಲಿಯೇ ಸ್ವಚ್ಛ ಧಾರ್ಮಿಕ ನಗರಿ ಪ್ರಶಸ್ತಿ ಲಭಿಸಿದ್ದು ಇದರ ಸವಿನೆನಪಿಗಾಗಿ ಕಳೆದ ಹತ್ತು ವರ್ಷಗಳಿಂದ ಈ ಒಂದು ಶುದ್ದ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದೇವೆ ಹಾಗೂ ನಮ್ಮ ಸಾಂಪ್ರದಾಯಿಕ ಪ್ರಕಾರ ಶ್ರಾವಣ ಮಾಸವು ಪವಿತ್ರ ಮಾಸವಾಗಿದ್ದು ಈ ಸಂದರ್ಭದಲ್ಲಿ ಮನೆಗಳಲ್ಲಿ ದೇವಾಲಯಗಳಲ್ಲಿ ವಿಧಿ ವಿಧಾನದ ಮೂಲಕ ಪೂಜಾ ಕಾರ್ಯಕ್ರಮಗಳು ನೆರವೇರುತ್ತಿದ್ದು ನಮ್ಮ ಶ್ರದ್ಧಾ ಕೇಂದ್ರಗಳು ಶುಚಿತ್ವವಾಗಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು ದೇವಸ್ಥಾನದ ಅರ್ಚಕರು ಸೇವಾಪ್ರತಿನಿಧಿ ರೇಖಾ ಕುಂಬಾರ್ ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




