ಸಿರುಗುಪ್ಪ : ನಗರದ ಸಿದ್ದಪ್ಪ ನಗರದಲ್ಲಿರುವ ಶ್ರೀ ವಾಲ್ಮೀಕಿ ಭವನದಲ್ಲಿ ಪ್ರೆಬ್ರುವರಿ ತಿಂಗಳ 8 ಮತ್ತು 9 ರಂದು ರಾಜನಹಳ್ಳಿಯಲ್ಲಿ ನಡೆಯುವ ಆದಿಕವಿ ಮಹರ್ಷಿ ವಾಲ್ಮೀಕಿಯ 7ನೇ ವರ್ಷದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಆಮಂತ್ರಣ ಪತ್ರಿಕೆಯನ್ನು ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಅವರು ಬಿಡುಗಡೆಗೊಳಿಸಿದರು.
ನಂತರ ಆಶೀವರ್ಚನ ನೀಡಿದ ಶ್ರೀಗಳು ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಶ್ರೀಗಳ 18ನೇ ವರ್ಷದ ಪುಣ್ಯಾರಾಧನೆ, ಹಾಗೂ ನಮ್ಮ 17ನೇ ವರ್ಷದ ಪಟ್ಟಾಧಿಕಾರದ ಮಹೋತ್ಸವ ಜರುಗಲಿದ್ದು, ಜಾತ್ರೆಗೆಂದು ಬರುವ ಸಹಸ್ರಾರು ಭಕ್ತರ ದಾಸೋಹಕ್ಕೆಂದು ಈ ಭತ್ತದ ನಾಡಿನ ಮಾಜಿ ಶಾಸಕ ಎಮ್.ಎಸ್.ಸೋಮಲಿಂಗಪ್ಪ ಹಾಗೂ ಹಾಲಿ ಶಾಸಕ ಬಿ.ಎಮ್.ನಾಗರಾಜ ಅವರು ದಾನವಾಗಿ ಕಳುಹಿಸುತ್ತಿರುವ ಅಕ್ಕಿಲೋಡ್ ಅನ್ನದಾಸೋಹಕ್ಕೆ ನೆರವಾಗಿದೆ.
ಪ್ರತಿವರ್ಷದಂತೆ ಈ ಸಲವು ಸಹ ಈ ನಾಡಿನ ವಾಲ್ಮೀಕಿ, ನಾಯಕ, ಬೇಡರ ಕುಲಬಾಂಧವ ಭಕ್ತಾದಿಗಳು, ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಪದಾಧಿಕಾರಿಗಳು ಒಟ್ಟುಗೂಡಿ ಜಾತ್ರಾ ಸಮಿತಿಗೆ ತಾಲೂಕಾಧ್ಯಕ್ಷರನ್ನು ನೇಮಿಸಿಕೊಂಡು ಅವರ ನೇತೃತ್ವದಲ್ಲಿ ಶ್ರೀ ಮಠಕ್ಕೆ ತಮ್ಮ ತಮ್ಮ ದೇಣಿಗೆಯನ್ನು ಸಮರ್ಪಿಸಿ ಮಹರ್ಷಿ ವಾಲ್ಮೀಕಿಯವರ ಕೃಪೆಗೆ ಪಾತ್ರರಾಗಬೇಕೆಂದರು.
ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಎಮ್.ಎಸ್.ಸಿದ್ದಪ್ಪ ಮಾತನಾಡಿ ನಮ್ಮ ಸಮುದಾಯವನ್ನು ಗಟ್ಟಿಗೊಳಿಸಲು ಜಾತ್ರೆಗೆ ಬಂದಂತಹ ಭಕ್ತಾದಿಗಳಿಗೆ ಜಾಗೃತಿ ಮೂಡಿಸುತ್ತಿರುವ ಸ್ವಾಮೀಜಿ ಅವರ ಬೆಂಬಲಕ್ಕೆ ನಾವೆಲ್ಲಾ ನಿಲ್ಲಬೇಕೆಂದರು.
ಇದೇ ವೇಳೆ ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ವೆಂಕಟೇಶ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷ ಟಿ.ನರಸಿಂಹ ನಾಯಕ, ನಿಕಟಪೂರ್ವ ಅಧ್ಯಕ್ಷ ಎಮ್.ಹೊನ್ನಪ್ಪ, ಗೌರವಾಧ್ಯಕ್ಷ ಸಣ್ಣ ಯಲ್ಲಪ್ಪ, ಉಪಾಧ್ಯಕ್ಷರಾದ ಹೆಚ್.ವಿ.ಈರಣ್ಣ, ರಾರಾವಿ ವೆಂಕಟೇಶ, ಪ್ರಧಾನ ಕಾರ್ಯದರ್ಶಿ ಗಾದಿಲಿಂಗ, ಮುಖಂಡರಾದ ಎಮ್.ವೀರೇಶಪ್ಪ, ಹೆಡಗಿನಾಳ್ ವೆಂಕಟೇಶ ನಾಯಕ, ಶ್ರೀಶೈಲಪ್ಪ, ನರೇಂದ್ರಸಿಂಹ, ಅಲಬನೂರು ಯಂಕೋಬ, ಆರ್.ಟಿ.ಆದೆಪ್ಪ, ಮುದುಕಪ್ಪ, ವಿರುಪಾಕ್ಷಪ್ಪ, ಬೆಳಗಲ್ ಶಿವಪ್ಪ, ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ.