ಇಳಕಲ್ :- ಅಗಸ್ಟ್ 9 ತಾಲೂಕಿನ ಹಿರೇ ಸಿಂಗನಗುತ್ತಿ ಗ್ರಾಮದಲ್ಲಿ ಶ್ರೀ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾ ಯೋಗಿ ವೇಮನ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ಐದು ದಿನಗಳ ಪ್ರವಚನ ಹಾಗೂ ಪೂಜಾ ಕಾರ್ಯಕ್ರಮ ನಡೆಯಿತು.
ಹೇಮರೆಡ್ಡಿ ಮಲ್ಲಮ್ಮ& ವೇಮನರ ದೇವಸ್ಥಾನಗಳ ಉದ್ಘಾಟನೆ ಹಾಗೂ ಧರ್ಮ ಸಭೆ ಸಮಾರಂಭ ಡಾ. ಎಸ್ ಎನ್ ಅಮಾತ್ಯಪ್ಪನವರ ವೇದಿಕೆಯಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಿತು.
ಈ ಧರ್ಮಸಭೆಯಲ್ಲಿ ದಿವ್ಯ ಸಾನಿಧ್ಯವನ್ನು ರೆಡ್ಡಿ ಗುರು ಪೀಠದ ಪೂಜ್ಯರಾದ ಶ್ರೀ ವೇಮಾನಂದ ಮಹಾಸ್ವಾಮಿಗಳು, ಹಾಗು ನಂದವಾಡಗಿಯ ಡಾ.ಅಭಿನವ ಚನ್ನಬಸವ ಶಿವಾಚಾರ್ಯರು, ಹಾಗು ಸಿದ್ದಬಸವ ಕಬೀರಾನಂದ ಸ್ವಾಮಿಗಳು ಎಲ್ಲ ಪೂಜ್ಯರು ದಿವ್ಯ ಸಾನಿಧ್ಯದಲ್ಲಿ ಹಾಗೂ ರಾಜಕೀಯ ಮುಖಂಡರುಗಳು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಅಲ್ಲದೆ ಈ ಕಾರ್ಯಕ್ರಮದ ಗೌರವಾಧ್ಯಕ್ಷತೆಯನ್ನು ಮಾಜಿ ಸಚಿವರಾದ ಎಸ್ ಆರ್ ಪಾಟೀಲ್ ಮಾಜಿ ಸಚಿವರು ಹಾಗೂ ಅಧ್ಯಕ್ಷತೆಯನ್ನು ದೊಡ್ಡನಗೌಡ ಜಿ ಪಾಟೀಲ್ ಮಾಜಿ ಶಾಸಕರು ಹಾಗು ವಿಧಾನ ಪರಿಷತ್ ಸದಸ್ಯರಾದ ಪಿ ಎಚ್ ಪೂಜಾರ ವಹಿಸಿಕೊಂಡಿದ್ದರು.
ಬೆಂಗಳೂರಿನ ರೆಡ್ಡಿ ಜನಸಂಘದ ಕೃಷ್ಣಾ ರೆಡ್ಡಿ,ಪ್ರಭಾಕರ ರೆಡ್ಡಿ ,ನಾರಾಯಣ ಹಾದಿಮಿನಿ,ಶರಣಗೌಡ ಬಯ್ಯಾಪೂರ ಶಿವನಗೌಡ ಅಗಸಿಮುದ್ದೀನ್ ಉಪಸ್ಥಿತರಿದ್ದರು.
ಮಾಜಿ ಸಚಿವರಾದ ಎಸ್ ಆರ್ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಪಿ ಎಚ್ ಪೂಜಾರ್, ಮಾಜಿ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ್ ಎಲ್ಲ ಮಹನೀಯರು ಸಮಾಜದಲ್ಲಿ ಎಲ್ಲರೂ ಒಂದಾಗಿ ಸಂಘಟಿತರಾಗಿ ಆರ್ಥಿಕವಾಗಿ ಸಬಲರಾಗಿ ಶಿಕ್ಷಣವಂತರಾಗಿ ಎಂದು ಮಾತನಾಡಿದರು.
ದಿವ್ಯ ಸಾನಿಧ್ಯವನ್ನು ಅಲಂಕರಿಸಿದ ಪೂಜ್ಯ ವೇಮಾನಂದ ಸ್ವಾಮಿ ಅವರು ಮಾತನಾಡಿ ಮಹಾಯೋಗಿ ವೇಮನರು ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರು ರೆಡ್ಡಿ ಕುಲದ ದೇವರುಗಳು ಇವರ ಆರಾಧನೆಯಿಂದ ಬದುಕು ಬದಲಾವಣೆಯಾಗುತ್ತದೆ ಎಂದರು. ದೇವಸ್ಥಾನ ಕಟ್ಟುವುದರ ಜೊತೆಗೆ ದಿನನಿತ್ಯ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದಾಗ ಬದುಕಿಗೆ ನೆಮ್ಮದಿ ಸಿಗುತ್ತದೆ, ಆ ನಿಟ್ಟಿನಲ್ಲಿ ಮಲ್ಲಮ್ಮ ವೇಮನರ ಆದರ್ಶ ಅಳವಡಿಸಿಕೊಳ್ಳಿ ಎಂದರು.
ಉದ್ಘಾಟಕರಾಗಿ ವೇಮನ ಮೂರ್ತಿ ಅನಾವರಣ ಹಾಗೂ ವಿವಿಧ ಕ್ಷೇತ್ರದ ಶಾಸಕರುಗಳು ಮಾಜಿ ಶಾಸಕರುಗಳು ಸಚಿವರು ಮಾಜಿ ಶಾಸಕ ಸಚಿವರು ಆಗಮಿಸಿದ್ದರು.
ಈ ಭವ್ಯ ಕಾರ್ಯಕ್ರಮಕ್ಕೆ ಹಾಗೂ ಧರ್ಮಸಭೆಗೆ ರಾಜ್ಯದ ಮೂಲೆ ಮೂಲೆಗಳಿಂದ ಸಾರ್ವಜನಿಕರು ಉಪಸ್ಥಿತಿಯಲ್ಲಿ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು ಹೀಗಾಗಿ ಈ ಭವ್ಯ ಕಾರ್ಯಕ್ರಮ ಯಶಸ್ವಿ ಕಾರ್ಯಕ್ರಮ ಆಯಿತು ಹಿರೇ ಸಿಂಗನಗುತ್ತಿ ಗ್ರಾಮದ ಗುರುಹಿರಿಯರು,ಸುತ್ತಮುತ್ತಲಿನ ಗ್ರಾಮದವರು ಉಪಸ್ಥಿತರಿದ್ದರು..
ವರದಿ -ದಾವಲ್ ಸೇಡಂ