ಶ್ರಾವಣ ಮಾಸ ಪ್ರಯುಕ್ತ ಶ್ರೀ ಕ್ಷೇತ್ರ ಬಸವ ಕಲ್ಯಾಣದಲ್ಲಿ ಭಕ್ತರ ದಂಡು. ಬಸವೇಶ್ವರ ಪ್ರತಿಮೆಗೆ ಅಭಿಷೇಕ್ ವಿಶೇಷ ಬಿಲ್ವ ಪೂಜೆ
ನಿಪ್ಪಾಣಿ:ಜಗಜ್ಯೋತಿ ಬಸವಣ್ಣನವರ ಲಿಂಗೈಕ್ಯ ಸ್ಥಳ ಕೂಡಲಸಂಗಮ ಹಾಗೂ ಕಲ್ಯಾಣ ಪರ್ವ ಬಸವಕಲ್ಯಾಣ ದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಮೊದಲ ಸೋಮವಾರ ಸಾವಿರಾರು ಭಕ್ತರು ವಿವಿಧ ರಾಜ್ಯ ಗಳಿಂದ ಆಗಮಿಸಿ ಅಭಿಷೇಕ ಬಿಲ್ವಪತ್ರ ಪೂಜೆ, ಪ್ರಸಾದ, ಮಹಾಆರತಿ ಬೆಳಗಿ ಹರಕೆ ಪೂರೈಸುವುದರೊಂದಿಗೆ ಪುನೀತರಾದರು.

2ನೇ ಶತಮಾನದಲ್ಲಿ ಬಸವೇಶ್ವರರು ಅನುಭವ ಮಂಟಪ ಸ್ಥಾಪಿಸಿ ಬಸವ ಕಲ್ಯಾಣ ಹಾಗೂ ಕೂಡಲಸಂಗಮ ಕ್ಷೇತ್ರದಲ್ಲಿ ಮೊದಲ ಅನುಭವ ಮಂಟಪ ಸ್ಥಾಪಿಸಿ, ಸರ್ವ ಧರ್ಮ ಸಮಭಾವ, ಮೇಲು ಕೀಳು, ಉಚ್ಚ ನೀಚ, ಭೇದಭಾವ ತೊರೆದು ಸಮಾನತೆ, ನಿರ್ಮಿಸಲು ಶ್ರಮಿಸಿದ ಮಹಾನ್ ಪುರುಷರು, ಸುಮಾರು 500ಎಕರೆಗೂ ಅಧಿಕ ಜಾಗದಲ್ಲಿ ಅಲ್ಲಮಪ್ರಭು, ಸಿದ್ದರಾಮೇಶ್ವರ, ಮಾದರಸ, ಮಾದಲಾoಬಿಕೆ, ಅಕ್ಕಮಹಾದೇವಿ, ನೀಲಾಬಿಕೆ, ಚನ್ನ ಬಸವಣ್ಣನವರು ಸೇರಿದಂತೆ ಅನೇಕ ಮಹಾನ ಪುರುಷರು,ತಪಸ್ವಿಗಳ ಪ್ರತಿಮೆ ಸ್ಥಾಪಿಸಿ. ಅವರ ಆಚಾರ ವಿಚಾರ ತತ್ವಗಳು ಹಾಗೂ ವಚನಗಳ,ಪ್ರಸಾರಕ್ಕೆ ಲಿಂಗೈಕ್ಯ ಮಾತೆ ಮಹಾದೇವಿ, ಶ್ರಮಿಸಿದ್ದಾರೆ, ಅವರು ಲಿಂಗ ಪೂಜೆ ಮಾಡುವ ಗುಹೆಗಳು, ನೀರು ಬಳಸುವ 12ನೇ ಶತಮಾನದ ಬಾವಿ, ಕೆರೆ, ಅನುಭವ ಮಂಟಪ, ಅರಿವಿನ ಮನೆ, ಮಡಿವಾಳ ಮಾಚಿದೇವರ ಹೊಂಡ, ಅಕ್ಕ ನಾಗಮ್ಮನವರ ಗವಿ, ವಿವಿಧ ಸಾಧಕರ ಪ್ರತಿಮೆಗಳು, ಅವರ ದೈನಂದಿನ ವ್ಯವಹಾರ ವಸ್ತುಗಳ ಕುರುಹು, ಕಾಯ್ದಿರಿಸಲಾಗಿದೆ.

ಇಂತಹ ಶ್ರೀ ಕ್ಷೇತ್ರಕ್ಕೆ ಶ್ರಾವಣ ಮಾಸದ ಪ್ರಯುಕ್ತ ದಿನನಿತ್ಯ ಸಾವಿರಾರು ಸದ್ಭಕ್ತರು ಶ್ರೀ ಕ್ಷೇತ್ರಗಳಿಗೆ ಆಗಮಿಸುತ್ತಿದ್ದು ಸಮಸ್ತ ಲಿಂಗಾಯಿತ ಸಮಾಜದವರು, ಸದ ಭಕ್ತರು. ಆಗಮಿಸುತ್ತಿದ್ದಾರೆ. ಶ್ರಾವಣ ಮಾಸದ ಪ್ರಯುಕ್ತ ಬಿ.ವಿ ಫೈವ್,ನ್ಯೂಸ್ ವರದಿಗಾರರು ಸೆರೆ ಹಿಡಿದ ಸಾವಿರಾರು ದೃಶ್ಯಗಳು ಇಲ್ಲಿವೆ ನೋಡಿ.
ವರದಿ :ಮಹಾವೀರ ಚಿಂಚಣೆ




