Ad imageAd image

ಬಸವಣ್ಣ ಪೂಜೆ ಮಾಡುವ ಮಣ್ಣೆತ್ತಿನ ಅಮಾವಾಸ್ಯೆ ದಿನದಂದೆ ,ಅಕ್ರಮವಾಗಿ ಗೋವು ಸಾಗಾಟ, ತಡೆಹಿಡಿದ ಶ್ರೀರಾಮ್ ಸೇನೆ.

Bharath Vaibhav
ಬಸವಣ್ಣ ಪೂಜೆ ಮಾಡುವ ಮಣ್ಣೆತ್ತಿನ ಅಮಾವಾಸ್ಯೆ ದಿನದಂದೆ ,ಅಕ್ರಮವಾಗಿ ಗೋವು ಸಾಗಾಟ, ತಡೆಹಿಡಿದ ಶ್ರೀರಾಮ್ ಸೇನೆ.
WhatsApp Group Join Now
Telegram Group Join Now

ಬಾಗಲಕೋಟೆ:-  ರೈತನ ಮಿತ್ರ ಬಸವಣ್ಣನನಿಗೆ ಇಡೀ ಕರುನಾಡೇ ಪೂಜೆ ಸಲ್ಲಿಸುವ ಮಣ್ಣೆತ್ತಿನ ಅಮವಾಸ್ಯೆ ದಿನದಂದೆ ನಿನ್ನೇಯ ದಿನ ಜಿಹಾದಿಗಳು ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವುದನ್ನು ಕಂಡ ಶ್ರೀ ರಾಮ ಸೇನಾ ಕಾರ್ಯಕರ್ತರು ಮತ್ತು ಪೂಜ್ಯ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ವಿಶ್ವ ಕರ್ಮ ಮಠ ವೀರಾಪುರ ಮತ್ತು ಶ್ರೀ ರಾಮ ಸೇನಾ ಬೀಳಗಿ ತಾಲೂಕಾ ಅಧ್ಯಕ್ಷರು ಶ್ರೀ ನಾಗರಾಜ ಗಿಡ್ಡಿ ಅವರು ಗೋ ರಕ್ಷಣೆ ಮಾಡಿ ಬಾಗಲಕೋಟೆ ಗೋ ಶಾಲೆಗೆ ಬಿಟ್ಟು ತದ ನಂತರ ಗೋ ಸಾಗಾಟ ಮಾಡುವವರ ಮೇಲೆ ರಾತ್ರಿ ಮೊಕದ್ದಮೆ ದಾಖಲಾಗುವವರೆಗೂ ಪೊಲೀಸ್ ಸ್ಟೇಷನ್ನಲ್ಲಿ ಕುಳಿತ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ.

ವಿಷಯ ತಿಳಿದ ಕೂಡಲೇ ಬಾದಾಮಿ ಶ್ರೀರಾಮ್ ಸೇನೆ ಘಟಕದ ಮುಖಂಡರು ಜಿಲ್ಲಾಧ್ಯಕ್ಷ ಶಹಾಜಿ ಪವಾರ್ ಸಾರಾತ್ಯದಲ್ಲಿ ಶ್ರೀರಾಮ್ ಸೇನೆ ಮುಖಂಡರು ಗೋ ಸಾಗಾಟ

ಮಾಡುತ್ತಿದ್ದ ವಾಹನದ ಮೇಲೆ ದಾಳಿ ನಡೆಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎನ್ನಲಾಗ್ತಾ ಇದೆ.ಅಕ್ರಮ ಗೋವುಗಳನ್ನು ಸಾಗಿಸುತ್ತಿದ್ದವರ ವಿರುದ್ಧ ಬಾಗಲಕೋಟೆಯ ನವನಗರದಲ್ಲಿ ಎಫ್ ಐ ಆರ್ ಮಾಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಮಾದ್ಯಮಗಳ ಜೊತೆ ಮಾತನಾಡಿ ಶ್ರೀರಾಮ್ ಸೇನೆ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಶಹಾಜಿ ಪವಾರ್ ಮಾತನಾಡಿ ಅಕ್ರಮ ಗೋ ಸಾಗಾಣೆ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
Share This Article
error: Content is protected !!