ಬೆಂಗಳೂರು : ಸನಾತನ ಹಿಂದೂ ಧರ್ಮದ ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸದ ಬಂದರೆ ಸಾಮಾನ್ಯವಾಗಿ ಪುಣ್ಯ ಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಪಡೆಯುವುದು ನಮ್ಮ ಸಂಪ್ರದಾಯವಾಗಿದೆ ದೇವರ ವೃತ ಮಾಡುವುದರಿಂದ ಪುಣ್ಯ ಪ್ರಾಪ್ತಿ ಆಗುತ್ತದೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು.

ಅವರು ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ವ್ಯಾಪ್ತಿಗೆ ಬರುವ ಜಿಕೆಡಬ್ಲ್ಯೂ ಲೇಔಟ್ನಲ್ಲಿ ಬಿಜೆಪಿ ಮುಖಂಡ ಬಿ.ಎನ್ ದಿನೇಶ್ ಅವರ ಧರ್ಮಪತ್ನಿ ಶ್ರೀಮತಿ ಸವಿತಾ ದಿನೇಶ್ ಮತ್ತು ಮಕ್ಕಳೊಂದಿಗೆ ತಮ್ಮ ಸ್ವಗೃಹ ಸಮೃದ್ಧಿ ನಿಲಯದಲ್ಲಿ ಕುಟುಂಬದ ನೇತೃತ್ವದಲ್ಲಿ ಆಯೋಜಿಸಿದ್ದ ‘ಶ್ರೀ ಸತ್ಯನಾರಾಯಣ ಸ್ವಾಮಿ ಮತ್ತು ತಾಯಿ ಜಗನ್ಮಾತೆ ಶ್ರೀಹೊಂಗೇಲಕ್ಷ್ಮೀ ಅಮ್ಮನ’ ವಿಶೇಷ ಅಲಂಕಾರಿಕ ಪೂಜಾ ಮಹೋತ್ಸವದಲ್ಲಿ ಶಾಸಕ ಎಸ್ ಮುನಿರಾಜು ಪಾಲ್ಗೊಂಡು ದೇವರ ಪ್ರಾರ್ಥನೆ ಪ್ರವಚನ ವೃತಗಳಿಂದ ಮಾನವನ ಧರ್ಮಕ್ಕೆ ಶಾಂತಿ ನೆಮ್ಮದಿ ಸಮೃದ್ಧಿ ಸಕಲ ಸಂಪತ್ತು ಕರುಣಿಸುವ ಶಕ್ತಿ ತಾಯಿ ಜಗನ್ಮಾತೆ ಶ್ರೀಹೊಂಗೇಲಕ್ಷ್ಮೀ ಅಮ್ಮನ, ಕಷ್ಟ ಕಾರ್ಪಣ್ಯಗಳು ನಿವಾರಣೆಗೆ ಸತ್ಯನಾರಾಯಣ ಸ್ವಾಮಿ ಪೂಜೆ ಪುನಸ್ಕಾರ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ನಗರಸಭಾ ಮಾಜಿ ಅಧ್ಯಕ್ಷ ಅಂದಾನಪ್ಪ,
ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಂಗಳವಾಟರ್, ಜೆಡಿಎಸ್ ಯುವ ಮುಖಂಡ ನರಸಿಂಹಮೂರ್ತಿ ಸಿಂಹ, ಹಿರಿಯ ಬಿಜೆಪಿ ಮಾಜಿ ಅಧ್ಯಕ್ಷ ಕಣ್ಣಪ್ಪ, ಕೃಷ್ಣಯ್ಯ, ಚಿಂತಕ ಡಾ. ಸಂಗನ ಬಸಪ್ಪ ಬಿರಾದಾರ್, ಮಾಜಿ ಅಧ್ಯಕ್ಷ ನಾಗೇಶ್, ಮೋಹನ್ ಕುಮಾರ್, ಕಂಪ್ಯೂಟರ್ ವಿಜಯ ಕುಮಾರ್, ಪೀಣ್ಯ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾದ ಮಂಜುನಾಥ್, ಶಿವಕುಮಾರ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ವರದಿ : ಅಯ್ಯಣ್ಣ ಮಾಸ್ಟರ್




