Ad imageAd image

ಲೋಕಸಭಾ ಪಕ್ಷೇತರ ಅಭ್ಯರ್ಥಿಯಾದ ಶ್ರೀ ಶಂಭು ಕಲ್ಲೋಳಿಕರ್

Bharath Vaibhav
ಲೋಕಸಭಾ ಪಕ್ಷೇತರ ಅಭ್ಯರ್ಥಿಯಾದ ಶ್ರೀ ಶಂಭು ಕಲ್ಲೋಳಿಕರ್
WhatsApp Group Join Now
Telegram Group Join Now

ಹುಕ್ಕೇರಿ :-  ಚಿಕ್ಕೋಡಿ ಲೋಕಸಭಾ ಪಕ್ಷೇತರ ಅಭ್ಯರ್ಥಿಯಾದ ಶ್ರೀ ಶಂಭು ಕಲ್ಲೋಳಿಕರ್ ಇಂದು ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮಗಳಾದ ಚಿಕ್ಕೋಡಿ, ಶಿರಟ್ಟಿ, ಸಾರಾಪುರ, ಕಡಹಟ್ಟಿ, ಶಿರಡಾನ, ಬಾಗೇವಾಡಿ, ಹುಕ್ಕೇರಿ ಯವಕರು ಶ್ರೀ ಶಂಬು ಕಲ್ಲೋಳಿಕರ್ ಇವರನ್ನು ಶಿರಹಟ್ಟಿ ಗ್ರಾಮದಲ್ಲಿ ಬೃಹತ್ ರ್‍ಯಾಲಿ ಬರಮಾಡಿಕೊಂಡರು ನಂತರ ಎಲ್ಲಾ ಯುವಕರು ಸೇರಿ ಬೈಕ್ ರ್‍ಯಾಲಿ ಮುಖಾಂತರ ವಿವಿಧ ಗ್ರಾಮದಲ್ಲಿ ಚುನಾವಣೆ ಪ್ರಚಾರ ಮಾಡುತ್ತಾ ಹೃದಯಪೂರ್ವಕ ಬೆಂಬಲ ನೀಡಿದರು ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಯಾದ ಶಂಬು ಕಲ್ಲೋಳಿಕರ ಮಾಧ್ಯಮದವರೊಂದಿಗೆ ಮಾತನಾಡಿದರು.

ನನಗೆ ಹೃದಯಪೂರ್ವಕ ಸ್ವಾಗತಿಸಿದ ಅನಂತ ಧನ್ಯವಾದಗಳು ಹಾಗೆ ಮೇ 7ರಂದು ಕ್ರಮ ಸಂಖ್ಯೆ 16 ಆಟೋರಿಕ್ಷಾ ಚಿನ್ನೆಗೆ ನಿಮ್ಮ ಮತ ನೀಡಿ ಎಂದು ಮನವಿ ಮಾಡಿಕೊಂಡರು
ನಂತರ  ಸಾರ್ವಜನಿಕರಿಗೆ ಹಾಗೂ ಪ್ರಜ್ಞಾವಂತ ಮತದಾರರು ಇನ್ನಾದರೂ ಎಚ್ಚೆತ್ತುಕೊಂಡು ಯೋಗ್ಯವಾದ ಅಭ್ಯರ್ಥಿಗಳಿಗೆ ಮತ ನೀಡಿ ಸ್ವಾರ್ಥಕ್ಕಾಗಿ ನಮ್ಮಂತವರನ್ನು ಬಲಿಕೊಡುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ಎಷ್ಟೋ ಪ್ರತಿನಿಧಿಗಳು ವಿದ್ಯಾವಂತರ ಬಗ್ಗೆ ಹಾಗೂ ಇಲ್ಲಿ ಜನರ ಕಷ್ಟಕ್ಕೆ ಸ್ಪಂದಿಸದೆ ರಾಜಕೀಯ ಮಾಡಿದ್ದಾರೆ ಈಗ ನನಗೊಂದು ಅವಕಾಶ ಕೊಡಿ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ನನಗೆ ಭೇಟಿಯಾಗಲು ಬರಬೇಕಾದರೆ ಯಾವುದೇ ಮಧ್ಯವರ್ತಿಗಳ ಸಹಾಯ ಬೇಕಾಗಿಲ್ಲ ನಿವು ನೇರವಾಗಿ ಬಂದು ನನ್ನೊಂದಿಗೆ ನೇರವಾಗಿ ಮಾತನಾಡಬಹುದು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅದಕ್ಕಾಗಿ ಈ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.

ವರದಿ:-ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!