ಬಾದಾಮಿ:- ತಾಲೂಕ ಪಟ್ಟಣದ ರೇಲ್ವೆ ಸ್ಟೇಶನ್ ರಸ್ತೆಗೆ ಇರುವ ಶ್ರೀ ಶಿವ ಶಕ್ತಿ ಮಂದಿರಕ್ಕೆ,ಶ್ರಾವಣ ಮಾಸದ ಕೊನೆಯ ಸೋಮುವಾರ ಕುರಿತು.ಅಯ್ಯಪ್ಪ ಸ್ವಾಮಿ ಗುಡಿಯಿಂದ ಶಿವ ಶಕ್ತಿಮಂದಿರದ ವರೆಗೆ ಹೆಣ್ಣುಮಕ್ಕಳು ಆರತಿ ಹಿಡಿದು ಮತ್ತು ಕುಂಭ ಹೊತ್ತು, ವಾಧ್ಯ ಮೇಳದೊಂದಿಗೆ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿತು.
ನಂತರ ಹಿರಿಯರು ಶಾಲ್ ಧರಿಸಿ ಟೋಪಿ ಹಾಕಿಕೊಂಡು ಪೂಜೆ ಪುನಸ್ಕಾರ, ಭಜನೆ ಜೋತೆಗೆ ಪದಗಳನ್ನು ಹಾಡುತ್ತಾ ದೇವರ ರುದ್ರಾಭಿಷೇಕ,ಮಂಗಳಾರತಿ ಮಾಡಿ ಕಾರ್ಯಕ್ರಮ ಕೊನೆಯ ಅಂತಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಭಕ್ತಾಧಿಗಳು ಪ್ರಸಾದ ಸೇವಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಬಾದಾಮಿಯ,ಶಿವ ಶಕ್ತಿ ನಗರದ, ಗೊಂದಿಕೇರಿಯ, ಗುರುಹಿರಿಯರು, ಹೆಣ್ಣುಮಕ್ಕಳು, ಯುವಕರು,ಭಕ್ತರು,ಭಾಗಿಯಾಗಿದ್ದರು.
ವರದಿ:- ಎಸ್. ಎಸ್. ಕವಲಾಪುರಿ