ತುಮಕೂರು: ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭಾನುವಾರ ಬೆಳಗ್ಗೆ 10 ಗಂಟೆಯಲ್ಲಿ ಪಾವಗಡ ಪಟ್ಟಣದ ಶ್ರೀನಿವಾಸ ಚಿತ್ರಮಂದಿರದ ಮುಂಭಾಗದಲ್ಲಿರುವ ಶ್ರೀರಾಮಕೃಷ್ಣ ನ್ಯಾಯಬೆಲೆ ಅಂಗಡಿಗೆ ದಿಢೀರ್ ಭೇಟಿ ನೀಡಿ ಬಿಪಿಎಲ್ ಪಲಾನುಭವಿಗಳಿಗೆ ವಿತರಿಸುತ್ತಿರುವ ಅಕ್ಕಿಯನ್ನು ಪರಿಶೀಲಿಸಿದರು.
ನಂತರ ಅಲ್ಲಿದ್ದ ಫಲಾನುಭವಿಗಳ ಬಳಿ ಅಕ್ಕಿಯ ಗುಣಮಟ್ಟ ಸೇರಿದಂತೆ ಯಾವುದಾದರೂ ಸಮಸ್ಯೆಗಳು ಇದೆಯಾ ಎನ್ನುವುದರ ಬಗ್ಗೆ ಕೆಳಿದರೆ
ಈ ಸಂದರ್ಭದಲ್ಲಿ ಕೆಲ ಪಲಾನುಭವಿಗಳು ಸರ್ವರ್ ಸಮಸ್ಯೆ ಉಂಟಾಗಿದ್ದು ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾಯಬೇಕಾದಂತಹ ಪರಿಸ್ಥಿತಿ ಎದುರಾಗಿದೆ ಇದರಿಂದಾಗಿ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದಾಗ ಸ್ಥಳದಲ್ಲಿಯೇ
ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಅವರಿಗೆ ಒಂದು ಗಂಟೆ ಮುಂಚಿತವಾಗಿ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ತೆರೆದು ಪಡಿತರ ವಿತರಿಸಲು ಕ್ರಮ ವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಎಸಿ ಗೋಟುರು ಶಿವಪ್ಪ, ತಹಸಿಲ್ದಾರ್ ಡಿಎನ್ ವರದರಾಜು, ಆರ್ ಐ ಕಿರಣ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ಶಿವಾನಂದ
ಬಿವಿ5, ನ್ಯೂಸ್ ಚಾನೆಲ್ ಪಾವಗಡ ತಾಲೂಕು ತುಮಕೂರು ಜಿಲ್ಲೆ