ಎಜಬಾಸ್ಟನ್ ( ಬರ್ಮಿಂಗ್ ಹ್ಯಾಂ): ನಾಯಕ ಶುಭಮಾನ್ ಗಿಲ್ ಅವರ ಆಕರ್ಷಕ ದ್ವೀಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 587 ರನ್ ಗಳ ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಯಿತು.
ಶುಭಮಾನ್ ಗಿಲ್ 30 ಬೌಂಡರಿ, 3 ಸಿಕ್ಸರ್ ನೆರವಿನಿಂದ 269 ರನ್ ಗಳಿಸಿದರು. ರವೀಂದ್ರ ಜಡೆಜಾ 10 ಬೌಂಡರಿ, 1 ಸಿಕ್ಸರ್ ನೆರವಿನಿಂದ 89 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 42 ರನ್ ಗಳಿಸಿದರು. ಪ್ರತಿಯಾಗಿ ತನ್ನ ಮೊದಲ ಸರದಿ ಆರಂಭಿಸಿದ ಇಂಗ್ಲೆಂಡ್ ಎರಡನೇ ದಿನದ ಆಟ ಮುಗಿದಾಗ 3 ವಿಕೆಟ್ ಗೆ 77 ರನ್ ಗಳಿಸಿತ್ತು. ಹೀಗಾಗಿ ಇಂಗ್ಲೆಂಡ್ ಇನ್ನು ಭಾರತದ ಲೀಡ್ ಅಳಿಸಿ ಹಾಕಲು 510 ರನ್ ಗಳನ್ನು ಗಳಿಸಬೇಕಿದೆ.




