
ಬಳಕುವ ಬೆಡಗಿ ಶ್ವೇತಾ ತಿವಾರಿ ಹಿಂದಿ ಕಿರುಚಿತ್ರದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. 44 ರ ವಯಸ್ಸಿನ ನೀಳಕಾಯದ ಯುವತಿ ಫ್ಯಾಶನ್ ಪ್ರಿಯರು ಹೌದು. ಅವರು ಈಚೆಗೆ ತಿಳಿ ಹಸಿರು ಸಾಡಿಯಲ್ಲಿ ಮಿಂಚಿರುವ ಅವರ ಚಿತ್ರಗಳು ನೋಡುಗರ ಗಮನ ಸೆಳೆದಿವೆ.

ವಯಸ್ಸು 44 ಆದರೂ, ವಯಸ್ಸು ಕೇವಲ ಸಂಖ್ಯೆ ಮಾತ್ರ, ತಮ್ಮ ಮನಸ್ಸಿನ ಸ್ಥಿತಿ 18 ಯುವತಿಯನ್ನು ಮರೆ ಮಾಚುವಂತಿದೆ ಎಂಬುದನ್ನು ಅವರ ಉತ್ಸಾಹ, ಫ್ಯಾಶನ್ ಪ್ರೀತಿ ನೋಡಿದರೆ ಗೊತ್ತಾಗುತ್ತದೆ. ಈ ಕಿರುತೆರೆ ನಟಿಯ ಫ್ಯಾಶನ್ ಪ್ರೀತಿ ಹಾಗೂ ಹುಮ್ಮಸ್ಸನ್ನು ಅವರನ್ನು ಸನೀಹದಿಂದ ನೋಡಿದವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಅನಿಸಿರಲಿಕ್ಕೆ ಸಾಕು.





