ರಾಯಚೂರು : ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಶ್ರೀ(49) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಇಂದು ಮುಂಜಾನೆ 3:40 ರ ಸುಮಾರಿಗೆ ಸ್ವಾಮೀಜಿ ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಅವರನ್ನು ಲಿಂಗಸೂಗೂರು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತಿಂಥಣಿಯ ಕನಕ ಗುರು ಪೀಠದಲ್ಲಿಯೇ ಸ್ವಾಮೀಜಿ ಅಂತ್ಯಕ್ರಿಯೆ ನಡೆಸಲಾಗುವುದು. ಹಾಲುಮತದ ಪದ್ದತಿಯಂತೇ ಅಂತ್ಯಕ್ರಿತೆಗೆ ಸಿದ್ದತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿದೆ.
ಸಿದ್ದರಾಮಾನಂದ ಸ್ವಾಮೀಜಿ (ಮೂಲ ಹೆಸರು ಮೋಹನ್ ಪ್ರದಾನ) ಅವರು ಕಾಗಿನೆಲೆ ಕನಕಗುರು ಪೀಠದ ಪ್ರಮುಖ ಸ್ವಾಮೀಜಿಗಳಾಗಿದ್ದರು, ಇವರು ಸಮಾಜಸೇವೆ, ಸಾಹಿತ್ಯ, ಮತ್ತು ಹಾಲುಮತ ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುತ್ತಿದ್ದರು. ಚಿತ್ರದುರ್ಗದವರಾದ ಇವರು ಜೈನ, ಕ್ರೈಸ್ತ, ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೆ ಒಳಗಾಗಿದ್ದು, ನಂತರ ಕನಕಗುರು ಪೀಠ ಸ್ಥಾಪಿಸಿ ಸಾಮೂಹಿಕ ವಿವಾಹ, ದಾಸೋಹ, ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದರು. ಚಿತ್ರದುರ್ಗದ ಚಳ್ಳಕೆರೆಯವರಾದ ಇವರು, ಮನೆ ತೊರೆದ ನಂತರ ವಿವಿಧ ಧರ್ಮಗಳ ಅಧ್ಯಯನ ಮಾಡಿ, ನಂತರ ಕನಕಗುರು ಪೀಠದ ಹಾಲುಮತ ಧರ್ಮದ ಸೇವೆಗೆ ಮೀಸಲಾದರು.




