ಗದಗ: ರಾಜ್ಯದಲ್ಲಿ ಜಾತಿಗಣತಿ ಸಂಘರ್ಷ ಜೋರಾಗಿದೆ. ಸರ್ಕಾರದ ವಿರುದ್ಧ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ನಾಯಕರು ಸಿಡಿದೆದ್ದಿದ್ದಾರೆ.
ಇದರ ಬೆನ್ನಲ್ಲೇ ಈ ಹಿಂದೆ ಘೋಷಿಸಿದಂತೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಸಮೀಕ್ಷೆ ನಡೆಯಲಿದೆ.ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ಕುರುಬರಿಗೆ ಒಂದು ಸಲಹೆ ನೀಡಿದ್ದಾರೆ.
ಕುರುಬರಲ್ಲಿ ಅನೇಕ ಜಾತಿಗಳಿವೆ. ಅವೆಲ್ಲ ಬರೆಸಬೇಡಿ ಕುರುಬ ಅಂತ ಮಾತ್ರ ಬರೆಸಿ ಎಂದು ಸಿಎಂ ತಿಳಿಸಿದ್ದಾರೆ. ಕುರುಬರ ಸಂಘದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ‘ಸೆಪ್ಟೆಂಬರ್ 22 ರಿಂದ ಜಾತಿ ಗಣತಿ ಆರಂಭವಾಗುತ್ತಿದೆ.
ಹಾಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮ, ಜಾತಿ ಹೇಳಬೇಕು. ಇನ್ನು ಕುರುಬರಲ್ಲಿ ಅನೇಕ ಜಾತಿಗಳಿವೆ. ಆದರೆ ಕಾಲಂನಲ್ಲಿ ಅವೆಲ್ಲ ಬರೆಸಬೇಡಿ, ಕೇವಲ ಕುರುಬ ಅಂತ ಮಾತ್ರ ಬರೆಸಿ’ ಎಂದು ಸೂಚಿಸಿದ್ದಾರೆ.




