ಬೆಂಗಳೂರು : ಪಾಕ್ ವಿರುದ್ಧ ಯುದ್ದ ಬೇಡ ಎಂಬ ಸಿಎಂ ಹೇಳಿಕೆಗೆ ಇಡೀ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಿಎಂ ಪ್ರತಿಕ್ರಿಯಿಸಿದ್ದು, ನಾನು ಯುದ್ಧ ಮಾಡೋದು ಬೇಡ ಎಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಯುದ್ಧದಿಂದ ಎಲ್ಲಾ ಸರಿಯಾಗಲ್ಲ, ಯುದ್ಧವೇ ಬೇಡ ಎಂದು ನಾನು ಹೇಳಿಲ್ಲ, ಯುದ್ಧ ಅನಿವಾರ್ಯವಾದರೆ ಮಾತ್ರ ಯುದ್ಧ ಮಾಡಬೇಕು, ಭದ್ರತೆ ಕೊಡಬೇಕು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಈ ಹಿಂದೆ 40 ಜನ ಸಾವನ್ನಪ್ಪಿದ್ದರು, ಈಗ 28 ಪ್ರವಾಸಿಗರು ಮೃತಪಟ್ಟಿದ್ದಾರೆ, ಹೀಗಿರುವಾಗ ಯುದ್ಧ ಅನಿವಾರ್ಯವಿದ್ದರೆ ಮಾತ್ರ ಮಾಡಬೇಕು, ನನ್ನ ಪ್ರಕಾರ ಸದ್ಯ ಯುದ್ಧ ಬೇಡ ಎಂದು ಹೇಳಿರುವುದು, ಆದರೆ ಬಿಜೆಪಿ ಅವರು ಏನೇನೋ ಹೇಳುತ್ತಿದ್ದಾರೆ, ಅವರಿಗೆ ಉತ್ತರ ಕೊಡೋದೇ ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಈ ಹಿಂದೆ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ, ಕೇಂದ್ರ ಸರ್ಕಾರ ಬಿಗಿ ಭದ್ರತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು, ರಕ್ಷಣಾ ವ್ವವಸ್ಥೆಯನ್ನು ಸದೃಢಗೊಳಿಸಬೇಕು, ಜನಕ್ಕೆ ಖಂಡಿತವಾಗಿಯೂ ಯುದ್ಧ ಬೇಕಿಲ್ಲ, ಶಾಂತಿ ಮತ್ತು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದಕ್ಕೆ ಪಾಕ್ ಟಿವಿ ಮಾಧ್ಯಮಗಳು ಪದೇ ಪದೇ ಇವರ ಹೇಳಿಕೆಯನ್ನು ತೋರಿಸುತ್ತಾ, ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ವಿಚಾರದಲ್ಲಿ ಭಾರತದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ ಎಂದು ಸುದ್ದಿ ಪ್ರಕಟಿಸುತ್ತಿವೆ.