ಬಾಗಲಕೋಟೆ :-ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತ ಪಾಟೀಲ ಪರ ಪ್ರಜಾಧ್ವನಿ ಬೃಹತ್ ಕಾರ್ಯಕ್ರಮದಲ್ಲಿ ಅಬ್ಬರಿಸಿ ಪ್ರಚಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚುನಾವಣಾ ಚಾಣಕ್ಯ ಡಿ ಕೆ ಶಿವಕುಮಾರ್.
ಲೋಕಸಭಾ ಚುನಾವನಾ ಕೋಟೆ ನಗರಿ ಬಾಗಲಕೋಟೆ ಮಾತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ
ಚುನಾವಣಾ ರನಕಣದ ಚಾಣಕ್ಯ ಡಿ ಕೆ ಶಿವಕುಮಾರ್ ಹಾಗೂ ರಾಜ್ಯ ಮಟ್ಟದ ಮುಖಂಡರ ಸೈನ್ಯವೇ ನಿನ್ನೆ ಬಾಗಲಕೋಟೆಯಲ್ಲಿ ಅಬ್ಬರಿಸಿತು. ಜನಸಾಗರವೇ ಪ್ರಜಾಧ್ವನಿ ಕಾರುಕ್ರಮಕ್ಕೆ ಹರಿದು ಬಂದಿತ್ತು.
ಚುನಾವಣಾ ಚಾಣಕ್ಯ ಡಿ ಕೆ ಶಿ ಮಾತನಾಡಿ ಬಿ.ಜೆ.ಪಿ ಯವರು ಭಾವನಾತ್ಮಕವಾಗಿ ಅಷ್ಟೇ ಮಾತನಾಡುವವರು, ಆದರೆ ನಮ್ಮ ಕಾಂಗ್ರೆಸ್ ಪಕ್ಷ ಜನರಿಗೆ ಬದುಕು ಕಟ್ಟಿಕೊಡುವ ಪಕ್ಷ, ಬಸವಣ್ಣ ನ ನಾಡಿನಲ್ಲಿ ಸಹೋದರಿ ಸಂಯುಕ್ತಾ ಪಾಟೀಲ ನಿಮ್ಮ ಸಹೋದರಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ
ಅವಳಿಗೆ ಆಶೀರ್ವಾದ ಮಾಡಿ ಮತ ಹಾಕಿ ಗೆಲ್ಲಿಸಿ ಸಂಸತ್ತಿಗೆ ಕಳಿಸಿದ್ದೇ ಆದಲ್ಲಿ ಬಾಗಲಕೋಟೆ ಮತಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನಿಮ್ಮ ಗಟ್ಟಿ ಧ್ವನಿಯಾಗಿ ನಿಲ್ಲಲಿದ್ದಾಳೆ ಎಂದು ನೆರೆದ ಕಿಕ್ಕಿರಿದ ಜನಸಾಗರದಲ್ಲಿಮತದಾರರಿಗೆ ಕಳಕಳಿಯ ವಿನಂತಿ ಮಾಡಿ ಕೈ ಹಿಡಿದು ಮೇಲೆ ಎತ್ತಿ ವಿಜಯದ ಸಂಕೇತ ಸೂಚನೆ ಮಾಡಿದರು.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಇಂದು ನೆರೆದಿರುವ ಜನಸಾಗರ ನೋಡಿದರೆ ನನಗನ್ನಿಸುತ್ತಿದೆ ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ನಮ್ಮ ಪಕ್ಷದ ಈ ನಿಮ್ಮ ಸಹೋದರಿ ಶ್ರೀಮತಿ ಸಂಯುಕ್ತಾ ಪಾಟೀಲ ಗೆಲ್ಲುವುದು ಅಷ್ಟೇ ಸತ್ಯ ಎಂದು ವೇದಿಕೆಯಲ್ಲಿ ಸ್ಪಷ್ಟಪಡಿಸಿ ಪಕ್ಕದಲ್ಲಿ ನಿಂತುಕೊಂಡಿದ್ದ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಹಾಗೂ ಅಭ್ಯರ್ಥಿ ತಂದೆ ಸಚಿವ ಶಿವಾನಂದ ಪಾಟೀಲ ಶಿವಾನಂದ ಪಾಟೀಲರನ್ನು ನೋಡಿ ವಿಜಯದ ಸೂಚನೆಯನ್ನು ಹೊರಹಾಕಿದರು.
ಭಾಷನದುದ್ದಕ್ಕೂ ಬಿ ಜೆ ಪಿ ಪಕ್ಷ ಹಾಗೂ ಬಾಗಲಕೋಟೆ ಮತಕ್ಷೇತ್ರಕ್ಕೆ ಅಭಿವೃದ್ಧಿ ಮಾಡದೇ 4 ಬಾರಿ ಸಂಸದರಾಗಿ ಅಧಿಕಾರ ನಡೆಸಿದ ಸಂಸದರಾದ ಪಿ ಸಿ ಗದ್ದಿಗೌಡರ ವಿರುದ್ಧ ಹರಿಹಾಯ್ದು ತರಾಟೆಗೆ ತೆಗೆದುಕೊಂಡು ವಾಗ್ದಾಳಿ ನಡೆಸಿದರು.
ಡಿ ಕೆ ಶಿ ಹಾಗೂ ಟಗರು ಸಿದ್ದರಾಮಯ್ಯ ನವರ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರವಾಗಿ ಮಾಡಿದ ಅಬ್ಬರದ ಪ್ರಚಾರ ಕೋಟೆ ನಗರಿ ಕೋಟೆ ಕೊಟ್ಟಲಾಗಲೋಗೆ ಮಾರ್ದನಿಸಿತ್ತು ಎನ್ನಬಹುದು.ಸಚಿವರಾದ ಕೆ ಎನ್ ರಾಜಣ್ಣ, ಆರ್. ಬಿ. ತಿಮ್ಮಾಪೂರ, ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಮಾತನಾಡಿದರು.
ಇನ್ನೂ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಮಾತನಾಡಿ ನನಗೆ ಈ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಒಂದೇ ಒಂದು ಅವಕಾಶ ಕೊಡಿ ನಿಮ್ಮ ಜೀತದಾಳಾಗಿ ದುಡಿದು ನಿಮ್ಮ ಋಣ ತೀರಿಸುತ್ತೇನೆ ಎಂದು ಕೈ ಮುಗಿದು ವಿನಂತಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ,ಶಾಸಕ ಪ್ರದೀಪ್ ಈಶ್ವರ,ಸಚಿವ ಶಿವಾನಂದ ಪಾಟೀಲ, ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ,ಬೆಂಗಳೂರು ಭಾಗದ ಅಭ್ಯರ್ಥಿ ಸಾಮ್ಯಾ ರೆಡ್ಡಿ, ಎಸ್. ಆರ್.ಎಚ್. ವಾಯ್. ಮೇಟಿ ಪಾಟೀಲ,ಬಿ. ಆರ್. ಯಾವಗಲ್,ವಿಜಯಾನಂದ ಕಾಶಪ್ಪನವರ, ಭೀಮಸೇನ ಚಿಮ್ಮನಕಟ್ಟಿ,ಚುನಾವನಾ ಪ್ರಮುಖ ವಕ್ತಾರ ಮಹಾಂತೇಶ್. ಲಕ್ಶ್ಮಣ ಹಟ್ಟಿ, ಕಾಂಗ್ರೆಸ್ ನ ಮಹಿಳಾ ಅಧ್ಯಕ್ಷೆ ಶ್ರೀಮತಿ ರಕ್ಷಿತಾ ಭರತಕುಮಾರ ಈಟಿ,ಬಾಯಕ್ಕ ಮೇಟಿ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ