Ad imageAd image

ಸಿದ್ದರಾಮಯ್ಯ ‘ಬಿಸ್ಕೆಟ್’ ಹಾಕಿ ದಲಿತ ನಾಯಕರನ್ನು ಖರೀದಿಸಿದ್ದಾರೆ : ಮುನಿಸ್ವಾಮಿ ಕಿಡಿ

Bharath Vaibhav
ಸಿದ್ದರಾಮಯ್ಯ ‘ಬಿಸ್ಕೆಟ್’ ಹಾಕಿ ದಲಿತ ನಾಯಕರನ್ನು ಖರೀದಿಸಿದ್ದಾರೆ : ಮುನಿಸ್ವಾಮಿ ಕಿಡಿ
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ಮಾಡಿರುವ 5 ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ ಎಸ್ಟಿ ಎಸ್‌ಟಿಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಎಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು ಈ ಒಂದು ಪ್ರತಿಭಟನೆಯಲ್ಲಿ ಬಿಜೆಪಿಯ ಮಾಜಿ ಸಂಸದ ಸಿಎಂ ಸಿದ್ದರಾಮಯ್ಯ ಬಿಸ್ಕೆಟ್ ಹಾಕಿ ದಲಿತ ನಾಯಕರನ್ನು ಖರೀದಿಸಿದ್ದಾರೆ ಎಂದು ಕಿಡಿ ಕಾರಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ದಲಿತ ನಾಯಕರನ್ನು ಬಿಸ್ಕೆಟ್ ಹಾಕಿ ಸಿದ್ದರಾಮಯ್ಯ ಖರೀದಿಸಿದ್ದಾರೆ ದಲಿತರಿಗೆ ಮೀಸಲಿಟ್ಟ ಹಣ ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅಹಿಂದ ನಾಯಕ ಅಲ್ಲ. ಅಹಿಂದ ವಿರೋಧೀ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದ ಖಳನಾಯಕ. ಸಿದ್ಧರಾಮಯ್ಯ ಖರ್ಗೆಯವರು ಸಿಎಂ ಆಗುವುದನ್ನು ತಪ್ಪಿಸಿದ್ದಾರೆ ಹಾಗಾಗಿ ಅವರು ಒಬ್ಬ ಖಳನಾಯಕ ಎಂದು ಮಾಜಿ ಸಂಸದ ಮುನಿಸ್ವಾಮಿ ಕಿಡಿಕಾರಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!