Ad imageAd image

ಗೃಹಲಕ್ಷ್ಮಿ ಯೋಜನೆಯ ಮಹಿಳೆಯರ ಬದುಕಲ್ಲಿ ಹೊಸ ಚೈತನ್ಯ ತುಂಬಿದೆ : ಸಿದ್ದರಾಮಯ್ಯ 

Bharath Vaibhav
ಗೃಹಲಕ್ಷ್ಮಿ ಯೋಜನೆಯ ಮಹಿಳೆಯರ ಬದುಕಲ್ಲಿ ಹೊಸ ಚೈತನ್ಯ ತುಂಬಿದೆ : ಸಿದ್ದರಾಮಯ್ಯ 
siddaramaiah
WhatsApp Group Join Now
Telegram Group Join Now

ಬೆಳಗಾವಿ: ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಲ್ಲ. ಚುನಾವಣೆ ಆದ ಬಳಿಕವೂ ಅದನ್ನು ಮುಂದುವರಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಭೇಟಿ ಮಾಡಿದ್ದೇವೆ.

ಈ ವೇಳೆ ಯೋಜನೆಯಿಂದ ಆದ ಲಾಭವನ್ನು ವಿವರಿಸಿದ್ದಾರೆ. ಹಲವು ಹೆಣ್ಣುಮಕ್ಕಳು ಯೋಜನೆಯಿಂದ ಲಾಭ ಪಡೆದಿದ್ದಾರೆ. ಅವರ ಬದುಕಲ್ಲಿ ಹೊಸ ಚೈತನ್ಯ ತುಂಬಿದೆ. ಹೀಗಾಗಿ ಅವೆಲ್ಲರೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ ಎಂದರು.

ಗೃಹಲಕ್ಷ್ಮಿ ಯೋಜನೆಯು ಅತ್ತೆ-ಸೊಸೆ ಜಗಳವಾಡುವಂತೆ ಮಾಡಿದೆ ಎಂದು ಬಿಜೆಪಿಯವರ ಆರೋಪ ಮಾಡಿದ್ದಾರೆ. ಆದರೆ ಬಹಳಷ್ಟು ಮಂದಿ ಅತ್ತೆ-ಸೊಸೆ ಯವರಅ ನ್ಯೋನ್ಯವಾಗಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ ಈ ಯೋಜನೆಯಿಂದ ಲಾಭ ಆಗಿದೆ. ಅತ್ತೆ-ಸೊಸೆ ಒಟ್ಟಿಗೆ ಸೇರಿಕೊಂಡು ಇದರ ಲಾಭವನ್ನು ಪಡೆಯುತ್ತಿದ್ದೇವೆ ಎಂದಿದ್ದಾರೆ. ಇದರಿಂದ ನಮಗೆ ತೃಪ್ತಿಯಾಗಿದೆ ಎಂದು ಸಿಎಂ ಹೇಳಿದರು.

ಆರ್ಥಿಕ ಹಾಗೂ ಸಾಮಾಜಿಕವಾಗಿ ಮಹಿಳೆಯರನ್ನು ಸದೃಢವಾಗಿಸುತ್ತಿರುವ ಈ ಕಾರ್ಯಕ್ರಮವನ್ನು ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ನಿಲ್ಲಿಸಲ್ಲ. ಚುನಾವಣೆ ಆದ ಬಳಿಕವೂ ಮುಂದುವರಿಸುವುದಾಗಿ ಇದೇ ವೇಳೆ ಸಿಎಂ ಭರವಸೆ ನೀಡಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!