ಬೆಂಗಳೂರು : ಹೊಸ ವರ್ಷಕ್ಕೆ ಸಂಪುಟ ಪುನರಚನೆ ಆಗುತ್ತಾ ಎನ್ನುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳಿವು ನೀಡಿದ್ದು, ಸಚಿವ ಸಂಪುಟ ಪುನಾರಚಣೆ ಕುರಿತಂತೆ ಹೈ ಕಮಾಂಡ್ ಜೊತೆಗೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದು ತಿಳಿಸಿದರು. ಈ ಮೂಲಕ ಸಚಿವ ಸಂಪುಟ ಪುನಾರಚನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೊಸ ವರ್ಷಕ್ಕೆ ಸಂಪುಟದಲ್ಲಿ ಸರ್ಜರಿ ಮಾಡುತ್ತೀರಾ, ಸಂಪುಟ ಪುನಾರಚನೆ ಆಗುತ್ತಾ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಪುಟ ಪುನರ್ ರಚನೆ ಕುರಿತಂತೆ ಹೈಕಮಾಂಡ್ ಜೊತೆಗೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಹಾಗಾಗಿ ಸಿಎಂ ಹೇಳಿಕೆಯಿಂದ ಇದೀಗ ಸಂಪುಟ ಸಭೆ ಪುನಾರಚನೆ ಮತ್ತೆ ಜೀವ ಪಡೆದಿದೆ. ಹೊಸ ವರ್ಷದಲ್ಲಿ ಹೊಸ ತಂಡ ಕಟ್ಟುವ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಸಂಪುಟ ಪುನರಚನೆ ಬಗ್ಗೆ ಬೆಳವಣಿಗೆ ಆಗಿದ್ದು, ಕೆಲ ಪ್ರಭಾವಿ ನಾಯಕರು ತಡೆದಿಂದಾಗಿ ಈ ಒಂದು ವಿಷಯ ತಣ್ಣಗಾಗಿತ್ತು.
ಇದೀಗ ಮತ್ತೆ ಸಂಪುಟ ಪುನರಚನೆಗೆ ಆಗ್ರಹ ಜೋರಾಗಿದ್ದು, ಬಜೆಟ್ ಅಧಿವೇಶನದ ವೇಳೆ ಕೆಲ ಬದಲಾವಣೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೇವಲ ಒಂದೇ ಸ್ಥಾನಕ್ಕೆ ಈ ಒಂದು ಸಂಪುಟ ಪುನಾರಚನೆ ಸೀಮಿತವಾಗುತ್ತಾ ಅಥವಾ ಹೆಚ್ಚು ಮಂದಿ ಬದಲಾವಣೆ ನಿಶ್ಚಿತನಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯ ಮೇಲೆ ಕುತೂಹಲ ಮೂಡಿಸಿದೆ.