ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ಸರ್ಜರಿ ಆಗಲಿದೆ ಎನ್ನಲಾಗುತ್ತಿತ್ತು. ಹಲವು ಸಚಿವರು ಕೂಡ ಸಂಪುಟ ಪುನರ್ ರಚನೆಯ ಸುಳಿವು ನೀಡಿದ್ದರು. ಆದರೇ ಸಿದ್ಧರಾಮಯ್ಯ ಮಾತ್ರ ನಾನು ಸಿಎಂ ಹೇಳ್ತಾ ಇದ್ದೀನಿ, ಸಂಪುಟ ಪುನರ್ ರಚನೆ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಂತ ರಾಜ್ಯದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರವನ್ನು ವಿತರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಅವಧಿಯವರೆಗೆ ರಾಜ್ಯದಲ್ಲಿ ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ನಾನೇ ಚೀಫ್ ಮಿನಿಸ್ಟರ್ ಎಂಬುದಾಗಿ ಸ್ಪಷ್ಟ ಪಡಿಸಿದರು.
ಇನ್ನೂ ಸಂಪುಟ ಪುನರ್ ರಚನೆ ಆಗಲಿದ್ಯಾ ಎನ್ನುವ ಮಾತಿಗೆ ಪ್ರತಿಕಿರ್ಯಿಸಿದಂತ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸದ್ಯಕ್ಕೆ ಸಂಪುಟ ಪುನರ್ ರಚನೆಯಿಲ್ಲ. ಸಂಪುಟ ಸರ್ಜರಿಯೂ ಇಲ್ಲ. ನಾನೇ ಸಿಎಂ ಹೇಳ್ತಾ ಇದ್ದೀನಿ ಅಂತ ತಿಳಿಸಿದರು.
ಮುಡಾ ಅಕ್ರಮ ಖಂಡಿಸಿ ಬಿಜೆಪಿ-ಜೆಡಿಎಸ್ ನಾಯಕರು ನಡೆಸುತ್ತಿರುವಂತ ಮೈೂರು ಪಾದಯಾತ್ರೆಯೆಲ್ಲ ರಾಜಕೀಯ ಪ್ರೇರಿತವಾಗಿದೆ. ಇದು ರಾಜಕೀಯ ಪ್ರೇರಿತ ಪಾದಯಾತ್ರೆಯಾಗಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದಾಗಿ ಹೇಳಿದರು.