Ad imageAd image

ಸಿದ್ದರಾಮಯ್ಯ ನಾನು ಕದ್ದು ಮುಚ್ಚಿ ಏನು ಮಾತನಾಡಿಲ್ಲ : ಡಿ. ಕೆ ಶಿವಕುಮಾರ್ 

Bharath Vaibhav
ಸಿದ್ದರಾಮಯ್ಯ ನಾನು ಕದ್ದು ಮುಚ್ಚಿ ಏನು ಮಾತನಾಡಿಲ್ಲ : ಡಿ. ಕೆ ಶಿವಕುಮಾರ್ 
DKS
WhatsApp Group Join Now
Telegram Group Join Now

ಬೆಂಗಳೂರು : ಸಿಎಂ ಸಿದ್ದರಾಮಯ್ಯ ನಾನು ಕದ್ದು ಮುಚ್ಚಿ ಮಾತನಾಡಿಲ್ಲ. ನಮ್ಮ ಪಕ್ಷದ ವರಿಷ್ಠರು ಎಲ್ಲರೂ ಸೇರಿ ಮಾತನಾಡಿದ್ದೇವೆ ಎಂದು ಪವರ್ ಶೇರಿಂಗ್ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಸಿದ್ದರಾಮಯ್ಯ ಏನು ಮಾತನಾಡಿದ್ದೇವೆ ಅಂತ ನಮಗೆ ಮಾತ್ರ ಗೊತ್ತು.

ನಾವೇನು ಕದ್ದು ಮುಚ್ಚಿ ಮಾತಾಡಿಲ್ಲ. ನಮ್ಮ ಪಕ್ಷದ ವರಿಷ್ಠರು ಹಾಗೂ ನಾವು ಎಲ್ಲ ಸೇರಿ ಮಾತನಾಡಿದ್ದೇವೆ ಆ ಮಾತಿನ ಪ್ರಕಾರ ಇಬ್ಬರು ಮಾತನಾಡಿಕೊಂಡಿದ್ದೇವೆ. ಬೇರೆ ಯಾರು ಟೆನ್ಶನ್ ತೆಗೆದುಕೊಳ್ಳುವುದು ಹೇಳಿಕೆ ಕೊಡುವುದರಿಂದ ಯಾರಿಗೂ ಏನು ಪ್ರಯೋಜನ ಆಗಲ್ಲ.

ಹೇಳಿಕೆ ಕೊಡುವವರು ನನ್ನ ಪರವಾಗಿ ಕೊಡಬಹುದು, ಅಥವಾ ನನ್ನ ವಿರುದ್ಧ ಕೊಡುತ್ತಿರಬಹುದು. ಮಂತ್ರಿಗಳು ಶಾಸಕರು ಯಾರೇ ಇರಲಿ, ಪಕ್ಷ ಡ್ಯಾಮೇಜ್ ಮಾಡುವ ಹೇಳಿಕೆಗಳಾಗಿವೆ ಹೊರತು ಪಕ್ಷಕ್ಕೆ ಒಳ್ಳೆಯ ಮಾಡುವ ಹೇಳಿಕೆಗಳಿಲ್ಲ. ಎಲ್ಲ ಬಾಯಿ ಮುಚ್ಚಿಕೊಂಡು ಇದ್ದಾರೆ ಒಳ್ಳೆದು ಅಂತ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ ಎಂದರು.

ಎಐಸಿಸಿ ಮೀಟಿಂಗ್ ನಲ್ಲಿ ಭಾಗಿಯಾಗಲು ನಾನು ದೆಹಲಿಗೆ ಹೋಗುತ್ತಿದ್ದೇನೆ. ನನ್ನನ್ನು ಕರೆದಿದ್ದಾರೆ ಹೀಗಾಗಿ ಐಸಿಸಿ ಸಭೆಯಲ್ಲಿ ಭಾಗಿಯಾಗಲು ಹೋಗುತ್ತಿದ್ದೇನೆ. ಇವತ್ತು ಸಿಎಂ ಸಿದ್ದರಾಮಯ್ಯ ಜೊತೆ ಬಜೆಟ್ ಪೂರ್ವಭಾವಿ ಸಭೆ ಇತ್ತು.

ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ದೆಹಲಿಗೆ ಹೋಗುತ್ತಿದ್ದೇನೆ. ದೆಹಲಿಯಿಂದ ಬಂದ ಬಳಿಕ ಮತ್ತೆ ಮಾತನಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!