ಹುಬ್ಬಳ್ಳಿ : ಹಿಂದುತ್ವದ ಪರ ತಮ್ಮ ನಿಲುವು ತೋರಿಸುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇತರರಿಗೆ ಮಾದರಿಯಾಗಿದ್ದು, ಕೊನಗೂ ಅವರಿಗೆ ಬುದ್ಧಿ ಬಂದಂತೆ ಸಿಎಂ ಸಿದ್ದರಾಮಯ್ಯಗೂ ಬುದ್ಧಿ ಬರಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.
ಇತ್ತೀಚೆಗೆ ಡಿಕೆಶಿ ಅವರು ಮಹಾಕುಂಭ ಮೇಳಕ್ಕೆ ಭೇಟಿ, ಇಶಾ ಫೌಂಡೇಶ್ ಆಯೋಜಿಸಿದ್ದ ಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರ ರಾಜ್ಯ ರಾಜಕಾರಣದಲ್ಲಿ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಡಿಕೆಶಿ ಅವರಿಗೆ ಕುಂಭಮೇಳದಲ್ಲಿ ಪಾಲ್ಗೊಂಡ ಬಳಿಕ ಹಿಂದುತ್ವದ ಜಾಗೃತಿ ಬಂದಿದೆ. ಅವರಂತೆಯೂ ಸಿಎಂಗೂ ಬರಲಿ ಎಂದರು.
ಈ ಮೊದಲು ಹಿಂದೂ ವಿರೋಧಿಯಂತೆ ವರ್ತಿಸುತ್ತಿದ್ದ ಡಿಕೆಶಿ ಇದೀಗ ಹಿಂದೂತ್ವದ ಜಪ ಮಾಡುತ್ತಿದ್ದಾರೆ. ಆಗ ಮೊಘಲರಿಂದ ಭಾರತೀಯ ಸಂಸ್ಕೃತಿ ಹಾಳಾಗಿತ್ತು. ಭಾರತೀಯ ಸಂಸ್ಕೃತಿ ನಾಶ ಮಾಡಿದ್ದ ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿತ್ತು.
ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ಸಿಗರು ಯಾಕೆ ಹೋರಾಟ ಮಾಡಿದ್ರು ಎಂದು ಪ್ರಶ್ನಿಸಿದ ಈಶ್ವರಪ್ಪ, ಹಳೇ ಕಾಂಗ್ರೆಸ್ಸಿಗರ ರಕ್ತ ಈಗಲೂ ಕೆಲವೊಬ್ಬರ ಬಳಿ ಇದೆ. ಅದರಲ್ಲಿ ಡಿಕೆಶಿ ಕೂಡ. ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂವಾಗಿಯೇ ಸಾಯುವೆ ಅಂತಾ ಡಿಕೆಶಿ ಹೇಳಿದ್ದು, ಇದೇ ಅಲ್ವಾ ಹಿಂದುತ್ವವೆಂದರೆ ಎಂದು ಈಶ್ವರಪ್ಪ ಒತ್ತಿ ಹೇಳಿದರು.




