ಬೆಂಗಳೂರು : ನಾವು ಜಾತಿಗಣತಿ ಸಮೀಕ್ಷೆಯನ್ನ ಯಾವುದೇ ಕಾರಣಕ್ಕೂ ಮುಂದೂಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಬಿಜೆಪಿ ಅವರು ರಾಜಕೀಯ ಮಾಡುತ್ತಿದ್ದಾರೆ. ನಾವು ಜಾತಿಗಣತಿ ಸಮೀಕ್ಷೆಯನ್ನ ಯಾವುದೇ ಕಾರಣಕ್ಕೂ ಮುಂದೂಡಲ್ಲ, ಯಾಕೆ ಮುಂದೂಡಬೇಕು..?ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆಮಾಡಿದ್ದಾರೆ.
ಸೆ.22 ರಿಂದ ಜಾತಿ ಸಮೀಕ್ಷೆ ನಡೆಯಲಿದೆ. ಯಾವುದೇ ಕಾರಣಕ್ಕೂ ಇದನ್ನು ಹಿಂಪಡೆಯಲ್ಲ ಎಂದರು.ಜಾತಿಗಣತಿ ಸಮೀಕ್ಷೆ ಮುಂದೂಡುವಂತೆ ನಿರ್ದೇಶನ ಕೊಡಲು ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.




