Ad imageAd image

ಸಿದ್ದರಾಮಯ್ಯ ಕುರಬರನ್ನು ಎಸ್ಟಿಗೆ ಸೇರಿಸುತ್ತಾರೆ ಎಂಬುದು ಸುಳ್ಳು : ಎಚ್. ಎಂ ರೇವಣ್ಣ

Bharath Vaibhav
ಸಿದ್ದರಾಮಯ್ಯ ಕುರಬರನ್ನು ಎಸ್ಟಿಗೆ ಸೇರಿಸುತ್ತಾರೆ ಎಂಬುದು ಸುಳ್ಳು : ಎಚ್. ಎಂ ರೇವಣ್ಣ
WhatsApp Group Join Now
Telegram Group Join Now

ಬೆಂಗಳೂರು: ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರು,ಮಾಜಿ ಸಚಿವ ಎಚ್.ಎಂ ರೇವಣ್ಣ ಅವರು ಮಾತನಾಡಿ ಕಳೆದ 1931 ರಿಂದ ದೇಶದಲ್ಲಿ ಜನಗಣತಿ ಆಗಿಲ್ಲ.ಹೀಗಾಗಿ ಸಮುದಾಯಗಳ ಸ್ಥಿತಿಗತಿ ತಿಳಿಯಬೇಕಿದೆ ಎಂದರು.

ಹಾವನೂರು ವರದಿ ಬಳಿಕ ಯಾವ ವರದಿಗಳು ಆಗಲಿಲ್ಲ. ಕಾಂತರಾಜ್ ವರದಿಗೆ 10 ವರ್ಷ,ಅದು ಸರಿ ಇಲ್ಲ ಎಂದವರು ಮತ್ತೆ ಮಾಡಿ ಎಂದಿದ್ದರು. ಇದು ಹಿಂದುಳಿದ ಜಾತಿಗಳ ಪ್ರಶ್ನೆ ಮಾತ್ರ ಅಲ್ಲ. ಎಲ್ಲಾ ಸಮುದಾಯಗಳ ಪರಿಸ್ಥಿತಿ ತಿಳಿಯಲಿದೆ ಎಂದರು.

ನಾವು ಕುರುಬ ಸಮುದಾಯಗಳು ಈ ಸಮೀಕ್ಷೆಯಲ್ಲಿ ಭಾಗಿಯಾಗಬೇಕು. ಇದು ಸಿದ್ದರಾಮಯ್ಯ ಉಳಿವಿಗಾಗಿ ಅಂತ ಬಹಳ ಜನ ಮಾತಾಡ್ತಾರೆ.

ದೇವರಾಜು ಅರಸು ನಂತರ ಎಲ್ಲಾ ಸಮುದಾಯಗಳ ಏಳಿಗೆ ಬಗ್ಗೆ ಕಾಳಜಿ ಇರುವುದು ಸಿದ್ದರಾಮಯ್ಯ ಅವರಿಗೆ. ಕಾನೂನು ಅಡಿ, ಸಾಂವಿಧಾನಿಕ ಅಡಿ ನಡೆಯುತ್ತಿರುವ ಸಮೀಕ್ಷೆಯಾಗಿದೆ. ಯಾರನ್ನೂ ಒತ್ತಾಯ ಮಾಡಬಾರದು ಅಂತ ಕೋರ್ಟ್ ಹೇಳಿದೆ ಎಂದರು.

ನಮ್ಮ ಸಮಾಜ ಏನು ಬರೆಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಧರ್ಮ ಹಿಂದು, ಜಾತಿ ಕುರುಬ ಅಂತ ಬರೆಸಬೇಕು. ಯಾರಾದ್ರೂ ಜಾತಿ ಸರ್ಟಿಫಿಕೇಟ್ ನಲ್ಲಿ ಗೊಂಡ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ ಅಂತ ಇದ್ದರೆ ಅವರು ಅದನ್ನೇ ಬರೆಸಬಹುದು. ಉಪಜಾತಿ ಬರೆಸುವುದು ಅವರ ವಿವೇಚನೆಗೆ ಬಿಟ್ಟಿದ್ದು. ಅಥವಾ ಅನ್ವಯಿಸುವುದಿಲ್ಲ ಎಂದು ಬರೆಸುವಂತೆ ಸೂಚನೆ ನೀಡಿದರು.

ಕುರುಬರನ್ನ ಎಸ್ಟಿ ಗೆ ಸೇರಿಸುವ ಕೆಲಸ ಸಿದ್ದರಾಮಯ್ಯ ಮಾಡಲ್ಲ. ಸಿಎಂ ಆದವರಿಗೆ ಆ ಅಧಿಕಾರ ಇಲ್ಲ. ಅದು ರಾಜಕೀಯವಾಗಿ ಕೆಲವು ಆರೋಪ ಮಾಡ್ತಿದ್ದಾರೆ.

ಎಸ್ಟಿ ಗೆ ಕುರುಬರನ್ನ ಸೇರಿಸುವ ಶಿಫಾರಸು ಮಾಡಿದ್ದು ಬೊಮ್ಮಾಯಿ ಅವರು. ಸಿದ್ದರಾಮಯ್ಯ ಕುರುಬರನ್ನು ಎಸ್.ಟಿ ಗೆ ಸೇರಿಸುತ್ತಾರೆ ಎಂಬುದು ಸುಳ್ಳು ಎಂದರು.

ಕೆಲವರು ಕುರುಬರನ್ನು ಎಸ್ಟಿಗೆ ಕಳಿಸಬೇಕು ಅಂತ ಪ್ರಯತ್ನ ಮಾಡಿದ್ರು. ಅದು ಬಸವರಾಜ ಬೊಮ್ಮಾಯಿ ಮಾಡಿದ ಕೆಲಸ, ಸಿದ್ದರಾಮಯ್ಯ ಮಾಡಿದ್ದಲ್ಲ. ಕುಲಶಾಸ್ತ್ರ ಅಧ್ಯಯನ ಇಲ್ಲದೆಯೇ ಯಾರನ್ನು ಎಸ್.ಟಿಗೆ ಸೇರಿಸಲು ಸಾಧ್ಯವೇ ಇಲ್ಲ. ಒಬ್ಬ ಸಿಎಂ ಕೈಲಿ ಇದು ಇರುವುದಲ್ಲ, ಅದಕ್ಕೆ ಕೇಂದ್ರ ಸರ್ಕಾರವಿದೆ ಎಂದರು.

ಕೆಲವರು ಸಿದ್ದರಾಮಯ್ಯ ನೇ ಕುರುಬರನ್ನು ಎಸ್.ಟಿ ಗೆ ಸೇರಿಸುತ್ತಾರೆ ಅಂತ ಅಪ ಪ್ರಚಾರ ಮಾಡ್ತಿದ್ದಾರೆ. ಅದು ಕೇಂದ್ರ ಸರ್ಕಾರವೇ ಮಾಡುವುದು ಹೊರತು ರಾಜ್ಯ ಸರಕಾರವಲ್ಲ ಎಂಬುದು ಸಾಮಾನ್ಯ ಜನರಿಗೆ ಗೊತ್ತಾಬೇಕು. ಎಂದು ಹೆಚ್ ಎಂ ರೇವಣ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!