ಬೆಂಗಳೂರು : ಫೇಸ್‌ಬುಕ್ ನ ಪೋಸ್ಟ್ ನಲ್ಲಿ ಕಮೆಂಟ್ ಸೆಕ್ಷನ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವು ಬಯಸಿದ್ದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದರಾಮಯ್ಯನವರ ವಿರುದ್ಧ ಕಾಮೆಂಟ್ ಮಾಡಿದ್ದ ಕಿಡಿಗೇಡಿಗಳು ಬೇಗ ಸಾಯ್ಲಪ್ಪಾ ಎಂದು ಕಮೆಂಟ್ ಹಾಕಿದ್ದರು.
ಕಿಡಿಗೇಡಿಗಳ ಬಂಧಿಸಬೇಕೆಂದು ದೂರು ನೀಡಿದ ಬೆಂ.ಪಶ್ಚಿಮ ಜಿಲ್ಲಾ ಉಪಾಧ್ಯಕ್ಷ ಹಾಗೂ ಮತ್ತಿತರರು ಅವರ ವಿರುದ್ದ ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದ್ದರು.ದೂರಿನ ಮೇರೆಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿಗೆ ಸಿಎಂ ಸಿದ್ದರಾಮಯ್ಯ ಬೇಗ ಸಾಯಲಿ ಎಂದು ಅವರ ಸಾವನ್ನು ಬಯಸಲಾ ಗಿದೆ.