Ad imageAd image

ಲೈಂಗಿಕ ಕಿರುಕುಳ : ಸಮಿತಿ ರಚನೆ ಮಾಡುವಂತೆ ಫೈರ್ ಸಂಸ್ಥೆಯಿಂದ ಸಿದ್ದರಾಮಯ್ಯ ಮನವಿ

Bharath Vaibhav
ಲೈಂಗಿಕ ಕಿರುಕುಳ : ಸಮಿತಿ ರಚನೆ ಮಾಡುವಂತೆ ಫೈರ್ ಸಂಸ್ಥೆಯಿಂದ ಸಿದ್ದರಾಮಯ್ಯ ಮನವಿ
WhatsApp Group Join Now
Telegram Group Join Now

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿಯೂ ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಿದ್ದು, ಚಿತ್ರರಂಗದ ಮಹಿಳೆಯರ ರಕ್ಷಣೆಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ಫೈರ್ ಸಂಸ್ಥೆ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ನಟ ಚೇತನ್ ನೇತೃತ್ವದಲ್ಲಿ ಫೈರ್ ಸಂಸ್ಥೆಯ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೇರಳದಲ್ಲಿ ಹೇಮಾ ಸಮಿತಿಯಂತೆ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚಿಸುವಂತೆ ಮನವಿ ಮಾಡಿದರು.

150ಕ್ಕೂ ಹೆಚ್ಚು ನಟ-ನಟಿಯರು, ತಂತ್ರಜ್ಞರು, ನಿರ್ದೇಶಕರು, ಸಾಹಿತಿಗಳ ಸಹಿಯುಳ್ಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚನೆ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರೋಣ. ಶೀಘ್ರದಲ್ಲಿಯೇ ಈ ಬಗ್ಗೆ ಚರ್ಚೆಗೆ ಮತ್ತೊಮ್ಮೆ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಈ ವೇಳೆ ನಟ ಚೇತನ್, ನೀತು ಶೆಟಿ, ಶೃತಿ ಹರಿಹರನ್, ಹಿರಿಯ ಪತ್ರಕರ್ತೆ ವಿಜಯಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಜಸ್ಟಿಸ್ ಹೇಮಾ ನೇತೃತ್ವದ ಸಮಿತಿ ವರದಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಖ್ಯಾತ ನಟರು, ನಿರ್ದೇಶಕರು, ನಿರ್ಮಾಪಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಕಲಾವಿದರ ಸಂಘಡ ಅಧ್ಯಕ್ಷರಿಂದ ಹಿಡಿದು, ಪದದಹಿಕಾರಿಗಳವರೆಗೂ ರಾಜೀನಾಮೆ ಕೊಡುತ್ತಿದ್ದಾರೆ.

ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿಯೂ ಮಹಿಳೆಯರು ಒಳ್ಳೆಯ ವಾತಾವರಣದಲ್ಲಿ ಕೆಲಸ ಮಾಡುವ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ, ಮಹಿಳೆಯರ ಸುರಕ್ಷತೆ ನಿಟ್ಟಿನಲ್ಲಿ ಸಮಿತಿ ರಚಿಸಬೇಕು ಎಂಬುದು ಫೈರ್ ಸಂಸ್ಥೆ ಆಗ್ರಹವಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!