Ad imageAd image

ಸಿದ್ದರಾಮಯ್ಯ ಅವರನ್ನು ಸಮುದ್ರಕ್ಕೆ ವಿಸರ್ಜಿಸಬೇಕು : ಯಶ್‌ಪಾಲ್‌ ಸುವರ್ಣ ಕಿಡಿ

Bharath Vaibhav
ಸಿದ್ದರಾಮಯ್ಯ ಅವರನ್ನು ಸಮುದ್ರಕ್ಕೆ ವಿಸರ್ಜಿಸಬೇಕು : ಯಶ್‌ಪಾಲ್‌ ಸುವರ್ಣ ಕಿಡಿ
WhatsApp Group Join Now
Telegram Group Join Now

ಉಡುಪಿ: ಕೆಲಸಗಳು ಕುಂಠಿತಗೊಂಡಿದೆ. ಸಿದ್ದರಾಮಯ್ಯ ಸರಕಾರ ಗ್ಯಾರಂಟಿಗೆ ಹೆಚ್ಚು ತಲೆ ಬಿಸಿ ಮಾಡಿಕೊಂಡಿದೆ. ಇದರಿಂದ ರಾಜ್ಯ ಸರಕಾರದ ಬೊಕ್ಕಸದಲ್ಲಿ ಹಣವಿಲ್ಲದೇ ಪರದಾಡುವಂತಾಗಿದೆ ಎಂದು ಯಶ್‌ಪಾಲ್‌ ಸುವರ್ಣ ಹೇಳಿದ್ದಾರೆ. ಜೊತೆಗೆ, ರಾಜ್ಯಕ್ಕೆ ದುಸ್ಥಿತಿ ತಂದಿಟ್ಟಿರುವ ಸಿದ್ದರಾಮಯ್ಯ ಅವರನ್ನು ಸಮುದ್ರಕ್ಕೆ ವಿಸರ್ಜಿಸಬೇಕು ಎಂದು ಕಿಡಿಕಾರಿದರು.

ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಮಣಿಪಾಲದಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕುಂದಾಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ಜಿ.ರಾಮಕೃಷ್ಣ ಅವರಿಗೆ ನೀಡಲಾಗಿದ್ದ ಪ್ರಶಸ್ತಿಯನ್ನು ಸರ್ಕಾರ ತಡೆ ಹಿಡಿದಿದೆ. ಇದಕ್ಕೆ ನನ್ನ ವಿರೋಧವಿದೆ. ಸಿದ್ದರಾಮಯ್ಯ ಸರಕಾರದ ಈ ನಡೆಯನ್ನು ನಾನು ಖಂಡಿಸುತ್ತೇನೆ ಎಂದರು.

ಸಿದ್ದರಾಮಯ್ಯ ಸರಕಾರದಿಂದ ರಾಜ್ಯದ ಜನೆತೆಗೆ ಭಾರೀ ಮೋಸವಾಗುತ್ತಿದೆ. ಸಾಧಕರ ಪ್ರಶಸ್ತಿಯನ್ನು ತಡೆಹಿಡಿದಿದ್ದು ಸರಿಯಲ್ಲ. ಇದರಲ್ಲಿ ಎಸ್‌ಡಿಪಿಐ ಪಾತ್ರವೂ ಇದೆ. ಎಸ್‌ಡಿಪಿಐ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಎಸ್‌ಡಿಪಿಐ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಅವರು ಕಿಡಿಕಾರಿದರು. ಸಂಬಳ ಸಿಗದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿದ್ದರಾಮಯ್ಯ ಸಂಬಳ ಕೊಡಿಸಲಿ. ಈ ರೀತಿಯ ಹಲವು ವಿಷಯದಲ್ಲಿ ತಪ್ಪಾಗುತ್ತಿದೆ ಎಂದು ಯಶ್‌ಪಾಲ್‌ ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!