ಹಾಸನ : ‘ನನ್ನ ಅನಿಸಿಕೆ ಪ್ರಕಾರ ಇನ್ನೂ 15 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕು ಎಂಬುದಾಗಿದೆ’ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಹಾಸನದಲ್ಲಿ ಜನಕಲ್ಯಾಣ ಸಮಾವೇಶಕ್ಕೂ ಮುನ್ನ ಅಧಿಕಾರ ಹಂಚಿಕೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನಲ್ಲಿ ಅಧಿಕಾರ ಕೊಡುವುದು ಇಲ್ಲವೇ ತೆಗೆದುಕೊಳ್ಳುವುದು ನಿರ್ಧಾರ ಹೈಕಮಾಂಡ್ ಗೆ ಬಿಟ್ಟದ್ದು.ಕೇವಲ ಐದಲ್ಲೂ ಇನ್ನೂ 15 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರಿಗೆ ರಾಜ್ಯದ ಜನ ಅಪಾರ ಶಕ್ತಿ ತುಂಬಿದ್ದಾರೆ. ಅವರು ಶಕ್ತಿಹೀನರಲ್ಲ. ಜನ ಕಲ್ಯಾಣ ಸಮಾವೇಶದ ಮೂಲಕ ಅವರಿಗೆ ಮತ್ತಷ್ಟು ಶಕ್ತಿ ತುಂಬಿಸಲು ಸಮಾವೇಶ ನಡೆಯುತ್ತಿದೆ ಎಂಬುವುದೇ ವಾಸ್ತವದ ಸಂಗತಿ ಎಂದರು.
ಕಾಂಗ್ರೆಸ್ ವತಿಯಿಂದ ಜನಕಲ್ಯಾಣ ಸಮಾವೇಶ ನಡೆಸಲಾಗುತ್ತಿದ್ದು, ಈ ವಿಚಾರದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಯಾವ ಪ್ರಶ್ನೆಯೂ ಉದ್ಭವಿಸಲ್ಲ. ಹಾಸನ ಜೆಡಿಎಸ್‌ನ ಭದ್ರಕೋಟೆಯಲ್ಲ ಎಂಬ ಭ್ರಮೆ ಬೇಡ ಯಾಕಂದರೆ. ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ಏನಾಗಿದೆ ಜನ ಕಂಡಿದ್ದಾರೆ ಎಂದು ಜೆಡಿಎಸ್ ವಿರುದ್ಧ ಕುಟುಕಿದರು.