ಬೆಂಗಳೂರು : ವಿಪಕ್ಷ ನಾಯಕ ಅಶೋಕ ಹೇಳೋದೆಲ್ಲಾ ಬರೀ ಸುಳ್ಳು. ಯಾವತ್ತೂ ನಿಜ ಹೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು, ಜಾತಿ ಗಣತಿ ವರದಿ ಸಿಎಂ ಮನೆಯಲ್ಲಿದೆ ಎಂಬ ಅಶೋಕ್ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟು ಸಿಎಂ ಕಿಡಿಕಾರಿದರು.
ಜಾತಿಗಣತಿ ವರದಿಗೆ ಯಾರ ವಿರೋಧ ಇಲ್ಲ. ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲವೂ ಚರ್ಚೆಯಾಗಿದ್ದು, ಸಚಿವರಿಗೆ ಅಭಿಪ್ರಾಯ ಮಂಡನೆಗೆ ಹೇಳಿದ್ದೇನೆ. ಮುಂದಿನ ಕ್ಯಾಬಿನೆಟ್ ನಲ್ಲಿ ಎಲ್ಲವನ್ನೂ ಸಮಗ್ರವಾಗಿ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು.
ಸಂಪುಟ ಸಭೆಯಲ್ಲಿ ಯಾರು ಏರು ಧ್ವನಿಯಲ್ಲಿ ಮಾತಾಡಿಲ್ಲ. ಎಲ್ಲರಿಗೂ ಅಭಿಪ್ರಾಯ ಮಂಡಿಸೋದಕ್ಕೆ ಸೂಚಿಸಿದ್ದೇನೆ. ಊಹಾಪೋಹ ಬೇಡ ಎಂದು ಸಿಎಂ ಹೇಳಿದರು.
ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ ಯಾರಿಗೂ ಅನ್ಯಾಯ ಆಗಬಾರದು. ಎಲ್ಲರಿಗೂ ಸಮಾನತೆ ಸಿಗಬೇಕು. ಸ್ವತಂತ್ರ ಬಂದು 75 ವರ್ಷ ಕಳೆದರೂ ಬಡವರು ಬಡವರಾಗಿಯೇ ಉಳಿಯಬೇಕಾ..? ಎಲ್ಲಾ ಜಾತಿಯ ಬಡ ಜನರಿಗೆ ಶಿಕ್ಷಣ ಸಿಗಬೇಕಲ್ಲವಾ..? ಆರ್ಥಿಕ ಸಾಮಾಜಿಕ ಅಭಿವೃದ್ಧಿಯೇ ಜಾತಿ ವರದಿ ಉದ್ದೇಶ ಎಂದು ತಿಳಿಸದರು.