Ad imageAd image

ಅಂಬೇಡ್ಕರ್ ರವರ ಸಂವಿಧಾನ ದಿಂದ ಸಿದ್ದರಾಮಯ್ಯ ಕುಗ್ಗಲೇಬೇಕು: ವಿರೋಧ ಪಕ್ಷದ ನಾಯಕ ಚಲವಾದಿ.

Bharath Vaibhav
ಅಂಬೇಡ್ಕರ್ ರವರ ಸಂವಿಧಾನ ದಿಂದ ಸಿದ್ದರಾಮಯ್ಯ ಕುಗ್ಗಲೇಬೇಕು: ವಿರೋಧ ಪಕ್ಷದ ನಾಯಕ ಚಲವಾದಿ.
WhatsApp Group Join Now
Telegram Group Join Now

ಯಳಂದೂರು:-ಅಂಬೇಡ್ಕರ್ ರವರು ನೀಡಿರುವ ಸಂವಿಧಾನದಿಂದ ಸರ್ವರಿಗೂ ನ್ಯಾಯ ದೊರೆಯುತ್ತದೆ, ಹಾಗಾಗಿ ಮೂಡ ಹಗರಣ ದಿಂದ ಸಿದ್ದರಾಮಯ್ಯ ರವರು ಕುಗ್ಗಲೇಬೇಕು ಎಂದು ತಿಳಿಸಿದರು.

ಯಳಂದೂರು ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಾಜಿ ಸಚಿವ ಎನ್.ಮಹೇಶ್ ರವರು ನಿರ್ಮಿಸಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೃಹತ್ ಪ್ರತಿಮೆಗೆ ವಿಧಾನಪರಿಷತ್ ನ ವಿರೋಧ ಪಕ್ಷದ ನಾಯಕರಾದ ಚಲವಾದಿ ನಾರಾಯಣಸ್ವಾಮಿ ರವರು ಮಾಲಾರ್ಪಣೆ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ಬೆಳೆ ಹಾನಿಯಾಗಿದೆ ಅನೇಕ ಕಡೆ ಜೀವಗಳು ಹೋಗಿದೆ, ಇಂಥ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕು ಎಂದು ನಮ್ಮ ರಾಜ್ಯಧ್ಯಕ್ಷರಾದ ಬಿ. ವೈ ವಿಜಯೇಂದ್ರ ರವರು ಸಲಹೆ ಕೊಟ್ಟಿದ್ದಾರೆ, ಅದರಂತೆ ಇಂದು ಕೊಳ್ಳೇಗಾಲದಲ್ಲಿ ಮಾಜಿ ಸಚಿವರು ಎನ್. ಮಹೇಶ್ ಹಾಗೂ ಮಾಜಿ ಶಾಸಕ ಎಸ್. ಬಾಲರಾಜು ರವರ ಜೊತೆ ಕೆಲವು ಸಮಸ್ಯೆಗಳನ್ನು ತಿಳಿದುಕೊಂಡೆ, ರೈತರಿಗೆ ದಲಿತರಿಗೆ ಹಾಗೂ ಹಿಂದುಳಿದವರ ಮತ್ತು ಎಲ್ಲಾ ವರ್ಗದ ಜನರ ಸಂಕಷ್ಟಕವನ್ನು ಕೇಳುವುದು ವಿರೋಧ ಪಕ್ಷದ ಕೆಲಸ ಆ ಕೆಲಸವನ್ನು ಮಾಡಿದ್ದೇನೆ.

ಜಿಲ್ಲೆಯಲ್ಲಿ ಕೆಲವು ಭಾಗಗಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿದ್ದೇನೆ, ಸಿದ್ದರಾಮಯ್ಯ ನವರಿಗೆ ಹಣ ಎಲ್ಲಿ ಬರುತ್ತದೆ ಆ ಕಡೆ ಚನ್ನಾಗಿ ಕೆಲಸ ಮಾಡಿದ್ದಾರೆ, ಕದ್ದಮಾಲನ್ನು ವಾಪಸ್ ಕೊಟ್ಟಾಗ ಅವರು ಕಳ್ಳರೇ, ಅವರಿಗೆ ಶಿಕ್ಷೆ ಆಗಬೇಕು,ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಬಹಳ ಆದಗೆಟ್ಟಿದೆ,ಅವರ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿ ಬಿಟ್ಟಿದೆ, ವಿರೋಧ ಪಕ್ಷ ನಿದ್ದೆ ಮಾಡುವ ಕೆಲಸವನ್ನು ಮಾಡುತ್ತಿಲ್ಲ ಮಾಡಿದ ತಪ್ಪುಗಳನ್ನು ಜನರಿಗೆ ಎಳೆ ಎಳೆಯಾಗಿ ಬಿಚ್ಚಿಡುತ್ತೇವೆ,

ನಾನು ಜಗ್ಗಲ್ಲ,ನಾನು ಕುಗ್ಗಲ್ಲ, ಎಂದವರು ಸೈಟ್ ವಾಪಸ್ ಕೊಟ್ಟ ಮೇಲೆ ಕುಗ್ಗಿಲ್ಲವಾ, ಅಂಬೇಡ್ಕರ್ ರವರು ಎಲ್ಲರನ್ನು ಕುಗ್ಗಿಸುತ್ತಾರೆ,
ಎಲ್ಲರನ್ನು ಜಗ್ಗಿಸುತ್ತಾರೆ ಅದನ್ನು ತಿಳಿದುಕೊಳ್ಳಬೇಕು, ಈ ದೇಶವನ್ನ ಕಾಪಾಡುತ್ತಿರುವುದು ಸಂವಿಧಾನ, ವಿರೋಧ ಪಕ್ಷದವರಿಗೆ ಜಗ್ಗುತ್ತೀರಿ ಕುಗ್ಗುತ್ತೀರಿ ಅಂದಮೇಲೆ ಅಂಬೇಡ್ಕರ್ ಅವರಿಗೆ ಬಗ್ಗುವುದಿಲ್ಲವೇ ಎಂದು ವಿರೋಧಿಸಿದರು.

ಮೂಡ ಹಗರಣದಲ್ಲಿ ನಡೆಸಿರುವುದು ಪಕ್ಕ ಅಪರಾಧ, ಎರಡು ಕೋರ್ಟ್ ಗಳಲ್ಲೂ ನಿಮ್ಮ ವಿರುದ್ಧ ತೀರ್ಪು ಬಂದಿದೆ, ನಿಮಗೆ ನಿಜವಾಗಲೂ ಮಾನ ಮರ್ಯಾದೆ ಇದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು, ನಿಮಗೆ ಅದು ಇಲ್ಲ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಮಂಡಲ ಅಧ್ಯಕ್ಷ ಅನಿಲ್, ಮಹೇಶ್, ಭೀಮಪ್ಪ, ಮಹೇಶ್,ಮಾಂಬಳ್ಳಿ ರಾಮಣ್ಣ,ಟೈಗರ್ಸಿ ಮಹೇಶ್, ಸಿದ್ದರಾಜು, ಶಿವಪ್ರಸಾದ್, ನಾಗೇಶ್, ರಘುನಾಯಕ, ರಾಜು, ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ವರದಿ:-ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!