Ad imageAd image

ಮಹಾತ್ಮ ಗಾಂಧಿಯವರ ಬಗ್ಗೆ ಮೋದಿ ಅವರು ನೀಡಿರುವ ಹೇಳಿಕೆ ದಿಗ್ಬ್ರಮೆ ಮೂಡಿಸಿದೆ : ಸಿದ್ದರಾಮಯ್ಯ

Bharath Vaibhav
ಮಹಾತ್ಮ ಗಾಂಧಿಯವರ ಬಗ್ಗೆ ಮೋದಿ ಅವರು ನೀಡಿರುವ ಹೇಳಿಕೆ ದಿಗ್ಬ್ರಮೆ ಮೂಡಿಸಿದೆ : ಸಿದ್ದರಾಮಯ್ಯ
siddaramaiah
WhatsApp Group Join Now
Telegram Group Join Now

ಬೆಂಗಳೂರು : ಮಹಾತ್ಮ ಗಾಂಧಿಯವರ ಬಗ್ಗೆ ಪ್ರಧಾನಿ ಮೋದಿ ಅವರು ನೀಡಿರುವ ಹೇಳಿಕೆ ನನ್ನಲ್ಲಿ ದಿಗ್ಬ್ರಮೆ ಮೂಡಿಸಿದೆ. ಇದನ್ನು ಪ್ರಧಾನಿಗಳ ಅಜ್ಞಾನವೆನ್ನಬೇಕೋ ಅಹಂಕಾರವೆನ್ನಬೇಕೋ ಅವರೇ ಹೇಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಹಾತ್ಮ ಗಾಂಧಿಯವರ ಬಗ್ಗೆ ಪ್ರಧಾನಿ ಅವರು ನೀಡಿರುವ ಹೇಳಿಕೆ ನನ್ನಲ್ಲಿ ದಿಗ್ಬ್ರಮೆ ಮೂಡಿಸಿದೆ.ಇದನ್ನು ಪ್ರಧಾನಿಗಳ ಅಜ್ಞಾನವೆನ್ನಬೇಕೋ ಅಹಂಕಾರವೆನ್ನಬೇಕೋ ಅವರೇ ಹೇಳಬೇಕು.

ವಿಶ್ವದ ನೂರಾರು ದೇಶಗಳಲ್ಲಿ ಅನುಯಾಯಿಗಳನ್ನು ಹೊಂದಿರುವ, ಅಸತ್ಯ, ಅನ್ಯಾಯದ ವಿರುದ್ಧದ ಹೋರಾಟಕ್ಕೆ ಇಂದಿಗೂ ಸ್ಪೂರ್ತಿಯಾಗಿರುವ ಗಾಂಧಿಯವರ ಬಗ್ಗೆ ಮೋದಿಯವರ ಮಾತನ್ನು ಭಾರತೀಯರು ಮಾತ್ರವಲ್ಲ, ಸತ್ಯ, ಶಾಂತಿ, ಅಹಿಂಸೆಯಲ್ಲಿ ನಂಬಿಕೆಯಿಟ್ಟಿರುವ ಯಾರೊಬ್ಬರೂ ಒಪ್ಪಲಾರರು.

ವಾಸ್ತವದಲ್ಲಿ ಗಾಂಧಿಯವರ ಬದುಕು ಮತ್ತು ಆದರ್ಶಗಳು ಭಾರತೀಯರಿಗೆ ದಕ್ಕಿರುವುದಕ್ಕಿಂತ ಜಗತ್ತಿನ ಬೇರೆಡೆ ಅರಿವಿಗೆ, ಅನುಸರಣೆಗೆ ಬಂದಿರುವುದೇ ಹೆಚ್ಚು. ಗಾಂಧಿ ಎಂದರೆ ಜಾತಿ, ಧರ್ಮ, ಭಾಷೆ, ದೇಶಗಳೆಂಬ ಗಡಿಗಳನ್ನು ಮೀರಿದ ಚಿಂತನೆ. ಭಾರತ ಗಾಂಧೀಜಿಯವರನ್ನು ಸಿನೆಮಾ ಮೂಲಕ ಪರಿಚಯಿಸುವ ಮೊದಲೇ ಗಾಂಧಿ ವಿಶ್ವಕ್ಕೆ ಭಾರತದ ಪರಿಚಯ ಮಾಡಿಸಿದವರು. ನಿಮ್ಮನ್ನೂ ಗಾಂಧಿಯ ಭಾರತದವರೇ ಎಂದು ವಿಶ್ವ ಗುರುತಿಸುತ್ತಿದೆ ಎನ್ನುವುದನ್ನು ಮರೆಯದಿರಿ. ಮಾನ್ಯ ಪ್ರಧಾನಿಯವರೇ, ಸಂಘದಲ್ಲಿ ಕಲಿತ ಪಾಠ ಬಿಟ್ಟು ವಾಸ್ತವಕ್ಕೆ ಕಣ್ತೆರೆಯಿರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!