ಬೆಂಗಳೂರು : ತಮ್ಮ ಅನಾರೋಗ್ಯ ಹಾಗೂ ಮಂಡಿ ನೋವಿನ ನಡುವೆಯೂ ಸಿಎಂ ಸಿದ್ಧರಾಮಯ್ಯ ತಮ್ಮ ದಾಖಲೆಯ 16 ನೇ ಬಜೆಟ್ ನ್ನು ಮಂಡಿಸಿ ಬೀಗಿದ್ದಾರೆ.
ಮಂಡಿ ನೋವಿನಿಂದ ನರಳುತ್ತಿರುವ ಕಾರಣ ನಿಲ್ಲಲು ಸಾಧ್ಯವಾಗದೇ ಕುಳಿತೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ , ಸತತ 3 ತಾಸುಗಳ ಭಾಷಣವನ್ನು ಎಡೆಬಿಡದೆ ಓದಿದರು.
10:15 ಕ್ಕೆ ಬಜೆಟ್ ಓದರು ಪ್ರಾರಂಭಿಸಿದ ಸಿದ್ದರಾಮಯ್ಯ 1:45 ಗಂಟೆಗೆ ಭಾಷಣ ಮುಕ್ತಾಯ ಗೊಳಿಸಿದರು. ಒಟ್ಟು 3 ಗಂಟೆ 30ನಿಮಿಷಗಳ ಕಾಲ ಭಾಷಣ ಓದಿದ ಸಿಎಂ ನೀರು ಕುಡಿದು ಸುಧಾರಿಸಿಕೊಂಡ್ರು.
ನಡುನಡುವೆ ಕುವೆಂಪು, ಬಸವಣ್ಣ ಮುಂತಾದ ಕವಿಗಳ ವಾಣಿಯನ್ನು ಉದ್ಗರಿಸಿದ ಸಿಎಂ ಸಿದ್ದರಾಮಯ್ಯ ಯಥೇಚ್ಛವಾಗಿ ಡಾ. ಬಿ.ಆರ್ . ಅಂಬೇಡ್ಕರ್ ಅವರ ಉಕ್ತಿಗಳನ್ನೂ ಬಳಸಿದ್ದು ವಿಶೇಷವಾಗಿತ್ತು.




