ಬೆಂಗಳೂರು : ಶೀಘ್ರದಲ್ಲೇ ಬಿಜೆಪಿಗರ ಹಗರಣವನ್ನು ಬಯಲು ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ – ಜೆಡಿಎಸ್ ನಾಯಕರಿಗೆ ಇಲ್ಲ. ಅವರದೇ ಹಗರಣಗಳ ರಾಶಿ ಬಿದ್ದಿದೆ, ಅವೆಲ್ಲವನ್ನೂ ಆದಷ್ಟು ಶೀಘ್ರದಲ್ಲಿ ಹೊರತಂದು ಅವರ ಬಂಡವಾಳ ಬಯಲು ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹಗರಣವೇ ಅಲ್ಲದ ಮುಡಾ ವಿಚಾರವನ್ನು ಬಿಜೆಪಿ – ಜೆಡಿಎಸ್ ನಾಯಕರು ದೊಡ್ಡ ಹಗರಣವೆಂಬಂತೆ ಬಿಂಬಿಸಿ, ಆ ಮೂಲಕ ನಮ್ಮ ಸರ್ಕಾರವನ್ನು ಹೇಗೆ ಅಸ್ಥಿರಗೊಳಿಸಲು ಹೊಂಚು ಹಾಕಿದ್ದಾರೆ ಎಂಬುದನ್ನು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಪಕ್ಷದ ಹಿರಿಯ ನಾಯಕರಾದ ವಿ.ಎಸ್. ಉಗ್ರಪ್ಪ ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನೀವೊಮ್ಮೆ ಅವರ ಮಾತುಗಳನ್ನು ಕೇಳಿ ಎಂದು ಸಿಎಂ ಹೇಳಿದ್ದಾರೆ.