ಬಾಗೇಪಲ್ಲಿ : ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಂಜುನಾಥ್ ಗೌಡ ಆದೇಶ ಮೆರಗೆ ಭಾಗ್ಯನಗರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಎನ್ ಸುಬ್ಬಾರೆಡ್ಡಿ ಮಾರ್ಗದರ್ಶನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳದ ಬಾಲೇನಹಳ್ಳಿ ರಮೇಶ್ ನೇತೃತ್ವದಲ್ಲಿ ಇಂದು ಭಾಗ್ಯನಗರ [ಬಾಗೇಪಲ್ಲಿ] ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಚೇಳೂರು ಪಟ್ಟಣದ ಖಾಸಗಿ ಬಾಸ್ ನಿಲ್ದಾಣ ಮುಂಭಾಗ ಕೇಂದ್ರ ಬಿಜೆಪಿ ಸರ್ಕಾರದ ಮತಕಳ್ಳತನ ವಿರುದ್ಧ ಸಹಿ ಸಂಗ್ರಹ ಮತ್ತು ಜನಜಾಗೃತಿ ಅಭಿಯಾನವನ್ನು ಆಯೋಜಿಸಲಾಯಿತು.
ಚುನಾವಣೆಯಲ್ಲಿ ಮತಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗಿದೆ.
ಈ ವೇಳೆ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರದ ಚಾಕವೇಲು ಸುಧಾಕರ್ ರೆಡ್ಡಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಸುರೇಂದ್ರ ಅಣ್ಣನವರು, ನಾರಾಯಣಸ್ವಾಮಿ, ಕಡ್ಡಿಲು ವೆಂಕಟರಾವಣಪ್ಪ,ಜೆ ಎನ್ ಜಾಲಾರಿ ಶೇಖರ್ ರೆಡ್ಡಿ, ನಯಾಜ್, ಬೈರೆಡ್ಡಿ, ರಾಮಚಂದ್ರ ರೆಡ್ಡಿ, ಮಂಜುನಾಥ್,ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳದ ಚಂದ್ರಶೇಖರ,ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಭಾಗ್ಯನಗರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ರಾಜ್ ಕನ್ನಡಿಗ,ಬಾಗೇಪಲ್ಲಿ ಬ್ಲಾಕ್ ಅಧ್ಯಕ್ಷರಾದ ನರೇಂದ್ರ, ಉಪಾಧ್ಯಕ್ಷರಾದ ಪ್ರೇಮ್ ಕುಮಾರ್, ಗುಡಿಬಂಡೆ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಭಾಸ್ಕರ್, ಕಾಂಗ್ರೆಸ್ ಹಿರಿಯ ಮುಖಂಡರು, ಯುವ ಕಾಂಗ್ರೆಸ್ ಮುಖಂಡರು, ಸುಬ್ಬಾರೆಡ್ಡಿ ಅಣ್ಣನವರ ಅಭಿಮಾನಿಗಳು ಉಪಸ್ಥಿತರಿದ್ದರು.




