ನಿಪ್ಪಾಣಿ :ಹೌದು ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ನಿತ್ಯ ಜನದಟ್ಟಣೆ. ಸಿಬ್ಬಂದಿ ಕೊರತೆ ಹಾಗೂ ಸರ್ವರ್ ಡೌನ್ ದಿಂದಾಗಿ ಬ್ಯಾಂಕಿನಲ್ಲಿ ಗ್ರಾಹಕರ ಹಾಗೂ ಸಿಬ್ಬಂದಿಯ ನಡುವೆ ನಿತ್ಯ ವಾಗ್ವಾ ದ ಸಮಸ್ಯೆಗಳಿಂದಾಗಿ ಗ್ರಾಹಕರು ಗಂಟೆಗಟ್ಟಲೆ ಕಾಯಬೇಕಾದ ಪ್ರಸಂಗ ಬರುತ್ತಿದೆ. ಈ ಕುರಿತು ಬಿವಿ ಫೈವ್ ಪ್ರತಿನಿಧಿ ವ್ಯವಸ್ಥಾಪಕರೊಂದಿಗೆ ಮಾತನಾಡಿದಾಗ “ನಮ್ಮ ಬ್ಯಾಂಕಿನಲ್ಲಿ ಸದ್ಯ ಕ್ಯಾಶಿಯರ್ ಹಿಡಿದು ಅಟೆಂಡರ್ ವರೆಗೆ ಕನಿಷ್ಠ 8 ಸಿಬ್ಬಂದಿಗಳ ಅಗತ್ಯವಿದೆ ಆದರೆ ಸದ್ಯ ಕೇವಲ ನಾಲ್ಕು ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದೇವೆ ಈ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ.ಆದರೆ ಪ್ರಯೋಜನವಾಗುತ್ತಿಲ್ಲ ಸದ್ಯಕೆಲಸದ ಒತ್ತಡವಿದ್ದರೂ ನಾಲ್ಕು ಜನರಿಂದಲೇ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಬ್ಯಾಂಕಿನ ಗ್ರಾಹಕರು ಹಾಗೂ ಸ್ವಾಭಿಮಾನಿ ರೈತ ಸಂಘಟನೆ ಸದಸ್ಯರಾದ ಪಂಕಜ ತಿಪ್ಪಣ್ಣವರ್ ಮಾತನಾಡಿ ಸುಮಾರು 30 ಹಳ್ಳಿಗಳ ವ್ಯಾಪ್ತಿ ಹೊಂದಿದ ಕೆನರಾ ಬ್ಯಾಂಕ್ ಗೆ 2,000ಕ್ಕೂ ಅಧಿಕ ಗ್ರಾಹಕರಿದ್ದಾರೆ ದಿನನಿತ್ಯ 500ಕ್ಕೂ ಅಧಿಕ ಗ್ರಾಹಕರು ಆಗಮಿಸುತ್ತಾರೆ ಸಿಬ್ಬಂದಿ ಕೊರತೆಯಿಂದಾಗಿ ಸರಿಯಾಗಿ ಸೇವೆ ದೊರೆಯದೆ ಗಂಟೆಗಟ್ಟಲೆ ಕಾಯಬೇಕಾಗಿದೆ. ಆದಷ್ಟು ಬೇಗ ಕೆನರಾ ಬ್ಯಾಂಕ್ ನಲ್ಲಿಯ ಸಿಬ್ಬಂದಿಯನ್ನು ಭರ್ತಿ ಮಾಡಬೇಕು ಹಾಗೂ ರೈತರ ಸಮಸ್ಯೆಗೆ ಸ್ಪಂದಿಸಬೇಕು ಇಲ್ಲದಿದ್ದರೆ ರೈತ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಉದಯ ಪಾಟೀಲ್ ರಾಜಗೌಡ ಪಾಟೀಲ್ ಅಜರುದ್ದಿನ ಶೇಖಜಿ, ಅತಿಕ್ರಾಂತ ಪಾಟೀಲ ಸೇರಿದಂತೆ ಜನವಾಡ ಬೇಡಕಿಹಾಳ ಹಳ್ಳಿಗಳ ನೂರಾರು ಗ್ರಾಹಕರು ಉಪಸ್ಥಿತರಿದ್ದರು.
ವರದಿ:ಮಹಾವೀರ ಚಿಂಚನೆ




