Ad imageAd image

ಮೇ 2ರಿಂದ ಸಚಿವ ಸತೀಶ್ ಜಾರಕಿಹೊಳಿ ಆಲ್ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ : ರಾಜಶೇಖರ ತಳವಾರ

Bharath Vaibhav
ಮೇ 2ರಿಂದ ಸಚಿವ ಸತೀಶ್ ಜಾರಕಿಹೊಳಿ ಆಲ್ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ : ರಾಜಶೇಖರ ತಳವಾರ
WhatsApp Group Join Now
Telegram Group Join Now

ಬೆಳಗಾವಿ: ಭಾತಕಾಂಡೆ ಸ್ಪೋಟ್೯ ಆಕ್ಯಾಡೆಮಿ ಹಾಗೂ ಬೆಳಗಾವಿ ‌ಜಿಲ್ಲೆ ವಾಲ್ಮೀಕಿ ಸಮಾಜದ ಸಹಯೋಗದಲ್ಲಿ ಡಾ. ಸತೀಶ್ ಜಾರಕಿಹೊಳಿ ಆಲ್ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೇ.2 ರಂದು ಸರದಾರ್ಸ್ ಮೈದಾನದ ಆವರಣದಲ್ಲಿ ಡಾ. ಸತೀಶ್ ಜಾರಕಿಹೊಳಿ ಆಲ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಆಯೋಜಿಸಲಾಗಿದೆ. ಪೈನಲ್ ವಿಜೇತರಿಗೆ 3 ಲಕ್ಷ 50 ಸಾವಿರ ನಗದು ಹಾಗೂ ಟ್ರೋಫಿ, ರನರ್ ಅಪ್ ಗೆ 2 ಲಕ್ಷ ರೂ. ನಗದು ಹಾಗೂ ಟ್ರೋಫಿ, ಸರಣಿ ಶ್ರೇಷ್ಠ, ಅತ್ಯುತ್ತಮ ಬ್ಯಾಟ್ಸಮನ್, ಅತ್ಯುತ್ತಮ ಬಾಲರ್ ಪ್ರಶಸ್ತಿಯೂ ಇರುತ್ತದೆ ಎಂದರು.

ಕರ್ನಾಟಕದಿಂದ ಒಟ್ಟು 40 ಕ್ರಿಕೆಟ್ ತಂಡಗಳು ಭಾಗವಹಿಸಲಿವೆ. ಇದು 10 ದಿನಗಳ ಕಾಲ ನಾಕೌಟ್ ಪಂದ್ಯಾವಳಿ ನಡೆಯಲಿವೆ ಎಂದರು. ಕ್ರೀಡೆಗೆ ಉತ್ತೇಜನ ನೀಡುವ ಮೂಲಕ ಸಚಿವ ಸತೀಶ ಜಾರಕಿಹೊಳಿ ಅವರು ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಕರ್ನಾಟಕದ ಉದಯೋನ್ಮುಖ ಕ್ರಿಕೆಟಿಗರಿಗೆ ವೇದಿಕೆಯನ್ನು ಒದಗಿಸುತ್ತಿದ್ದಾರೆ. ಗ್ರಾಮೀಣ ಕ್ರೀಡಾಪಟುಗಳು ಸಹ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು. ಅವರ ಸಹ ಅಂತರಾಷ್ಟ್ರೀಯ ‌ಮಟ್ಟದಲ್ಲಿ ಬೆಳಬೇಕು ಎಂದು ವಿವಿಧ ಕ್ರೀಡೆಗಳನ್ನು ಆಯೋಜಿಸಿ ಅವಕಾಶ ಕಲ್ಪಿಸುತ್ತಿದ್ದಾರೆ. ಇಂತಹ ಕ್ರೀಡೆಗಳನ್ನು ಸದ್ಬಳಿಕೆ ಮಾಡಿಕೊಂಡು ಯುವಕರು ಜೀವನ ಗುರಿ ಮುಟ್ಟಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಂಡುರಂಗ ನಾಯಿಕ, ಮಿಲಿಂದ ಭಾತಕಾಂಡೆ, ಸಂಜು ನಾಯಿಕ, ರೂಪೇಶ ಪಾವಲೆ , ಪ್ರಸಾದ ಶಿರ್ವಾಲ್ಕರ್ , ನಾಸೀರ್ ಪಠಾಣ, ಹಾಗೂ ಇತರರು ಇದ್ದರು.

ಪ್ರತೀಕ್ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!