ಸಿಂಧನೂರು : ಜೂನ್ ೦೧, 2024 – 25ನೇ ಸಾಲಿನಲ್ಲಿ ಹಿಂಗಾರು ಮತ್ತು ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರಿಂದ ಜೋಳ ಖರೀದಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳಿಂದ ನಗರದ ತಹಸೀಲ್ ಕಛೇರಿ ಮುಂಭಾಗದ ಗೇಟ್ ಬಂದು ಮಾಡಿ ಜೋಳ ತುಂಬಿದ ಟ್ರ್ಯಾಕ್ಟರ್ ಗಳೊಂದಿಗೆ ನೂರಾರು ರೈತರು ಸತತ ನಾಲ್ಕೈದು ದಿನಗಳ ಕಾಲ ಹೋರಾಟ ಮಾಡಿದ ನಂತರವು ಅಧಿಕಾರಿಗಳಿಂದ ಬೆಂಬಲ ಬೆಲೆ ನಿಗದಿ ಪಡಿಸಲು ಸಾಧ್ಯವಾಗದ ಹಿನ್ನೆಲೆ ಇಂದು ಜೂನ್ 2ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟಗಳೊಂದಿಗೆ ಸೇರಿ ಸಿಂಧನೂರು ಬಂದ್ ಮಾಡುವುದರ ಮುಖಾಂತರ ಸರಕಾರಕ್ಕೆ ಎಚ್ಚರಿಕೆ ಕೊಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಗಿ ತಿಳಿಸಿದ್ದಾರೆ.

ನಂತರ ಅವರು ಮಾತನಾಡಿ ಜೋಳ ಕಟಾವ್ ಮಾಡಿ ಐದು ತಿಂಗಳ ಗತಿಸಿದೆ ಖರೀದಿ ಸಂದರ್ಭದಲ್ಲಿ ಗುಣಮಟ್ಟ ಪರೀಕ್ಷಿಸುವ ನೆಪದಲ್ಲಿ ಕೇಂದ್ರ ಸರ್ಕಾರದ ಉಗ್ರಾಣ ಗ್ರೇಡರ್ ಗಳು ರೈತರಿಗೆ ತೊಂದರೆ ಕೊಡುತ್ತಿದ್ದಾರೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ರಾಜ್ಯ ಉಗ್ರಣದಲ್ಲಿ ದಾಸ್ತಾನಿಗೆ ಅವಕಾಶ ನೀಡಿ ಆದೇಶ ಹೊರಡಿಸಬೇಕು ಮತ್ತು ಹಿಂಗಾರು ಋತುವಿನಲ್ಲಿ ನೋಂದಾಣಿಯಾಗಿರುವ ಎಲ್ಲಾ ರೈತರ ಸಂಪೂರ್ಣ ಜೋಳ ಖರೀದಿ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು ಸಹ ಪರಿಹಾರ ನೀಡುವಲ್ಲಿ ಸರ್ಕಾರ ನಿರ್ಲಕ್ಷ ಧೋರಣೆ ಖಂಡಿಸಿ ಇಂದು ಸೋಮವಾರ ಸಿಂಧನೂರು ಬಂದ್ ಕರೆಯಲಾಯಿತು ಎಂದು ಪ್ರಗತಿಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ನಾಗರಾಜ್ ಪೂಜಾರಿ ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ. ಅಮೀನ್ ಪಾಷಾ ದಿದ್ದಗಿ. ಬಸವರಾಜ ಗೋಡಿಹಾಳ. ನಾಗರಾಜ ಪೂಜಾರಿ. ರಮೇಶ್ ಪಾಟೀಲ್ ಬೇರಿಗಿ. ಬಸವಂತರಾಯ ಗೌಡ ಕಲ್ಲೂರು. ಬಸವರಾಜ ಹಂಚಿನಾಳ. ಚಿಟ್ಟಿ ಬಾಬು. ದುರ್ಗೇಶ ಬಾಲಿ. ಅಮ್ಮಿರಾಜ ಮ್ಯಾಕಲ್. ವಿಜಯಕುಮಾರ್. ಪರಶುರಾಮ್ ಭಂಡಾರಿ ಇನ್ನು ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ




