ಸಿಂಧನೂರು : ನಾವು ಸಂತ್ರಸ್ತರು ಹಿಂದೂ. ಮುಸ್ಲಿಂ. ದಲಿತ. ಹಿಂದುಳಿದ ಎಲ್ಲಾ ವರ್ಗದ ಜನರು ತಲೆ ಮಾರುಗಳು ಹಿಂದಿನಿಂದ ಇರುವ ನಮ್ಮ ಪಿತ್ರಾರ್ಜಿತ ಆಸ್ತಿಗಳನ್ನು ಮತ್ತು ಸ್ವಾತಂತ್ರ್ಯ ಬಂದ ನಂತರ ದಶಕಗಳ ಇಂದಿನಿಂದಲೂ ಕಂದಾಯ ಇಲಾಖೆ ನಿಯಮಗಳ ಪ್ರಕಾರ ಪಹಣಿ. ಮುಟೇಶನ್. ಇಸಿ. ಋಣಭಾರ ಪ್ರಮಾಣ ಪತ್ರ. ಪರಿಶೀಲನೆ ಮಾಡಿ ಸಕ್ರಮವೆಂದು ದಾಖಲಾತಿಗಳು ಪ್ರಕಾರ ಸಾಬೀತವಾಗಿರುವ ಆಸ್ತಿಗಳನ್ನು ನಮ್ಮ ಕಷ್ಟಾರ್ಜಿತದ ಹಣವನ್ನು ಕೊಟ್ಟು ಖರೀದಿಸಿ ನೊಂದಾಣೆ ಮಾಡಿಸಿರುವ ವ್ಯವಸಾಯ ಭೂಮಿಯನ್ನು ಇಂದು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ವಕ್ಪ ಭೂಮಿ ಎಂದು ಪಾಂಡುಗಳಲ್ಲಿ ನಮೂದಿಸುತ್ತಿದ್ದಾರೆ ಇದು ಎಷ್ಟು ಸರಿ,
ರೈತರು ಸ್ವತಃ ಖರೀದಿ ಮಾಡಿರುವ ಭೂಮಿ ಒಂದು ಭಾಗವಾದರೆ ಮತ್ತೊಂದು ಭಾಗ ಸರ್ಕಾರದಿಂದ ದಲಿತರು ಹಿಂದುಳಿದ ವರ್ಗದ ಜನರಿಗೆ 50 ವರ್ಷಗಳ ಹಿಂದೆ ಊಳುವವನೇ ಭೂಮಿಯ ಒಡೆಯ ಯೋಜನಡಿಯಲ್ಲಿ ಜಾಗೀರ್ದಾರರು. ಜಮೀನ್ದಾರರು. ಮತ್ತು ದೊಡ್ಡ ದೊಡ್ಡ ಭೂ ಹಿಡುವಳಿದಾರರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶೇಖರಿಸಿ ಹಂಚಿಕೆ ಮಾಡಿರುವ ಭೂಮಿಯು ಮತ್ತೊಂದು ಭಾಗವಾಗಿದೆ.
ಗೋಮಾಳುಗಳು ಗೌಠಾಣಗಳು ಮಠ ಮಂದಿರ ರುದ್ರಭೂಮಿ ಸಹ ವಕ್ಭೂಮಿ ಎಂದು ಪಹಣಿಗಳಲ್ಲಿ ನಮೋದಿಸುತ್ತಿದ್ದಾರೆ. ಈಗಾಗಲೇ 2017-18 ರಲ್ಲಿ 2172 ಎಕ್ಕರೆ ಜಮೀನನ್ನು ವಕ್ಫ ಮಂಡಳಿ ವಕ್ಫ ಆಸ್ತಿ ಎಂದು ನಮೂದಿಸಲು ಆದೇಶಿಸಿದ್ದಾರೆ ಆದರೆ ತಲತಲಾಂತರದಿಂದ ಉಳಿಮೆ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲಿಸುವ ಪ್ರಯತ್ನ ಸಂಪೂರ್ಣ ಅಸಂವಿಧಾನಿಕ ಇದನ್ನು ಈ ಕೂಡ ನಿಲ್ಲಿಸಬೇಕು 1974ರ ಭೂ ಸುಧಾರಣೆ ಕಾಯ್ದೆಗಳಿಗೆ ವ್ಯತಿರಕ್ತವಾಗಿ ವಕ್ಪ ಮಂಡಳಿ ನಡೆದುಕೊಳ್ಳಬಾರದು ಎಂಬುದು ನಮ್ಮ ಹಕ್ಕೋತ್ತಾಯ,
ಎಂದು ಮಾನ್ಯ ತಹಶೀಲ್ದಾರ್ ಸಿಂಧನೂರು ರವರ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ವರದಿ:ಬಸವರಾಜ ಬುಕ್ಕನಹಟ್ಟಿ