ಮಧ್ಯ ಪ್ರದೇಶ: ಮಧ್ಯ ಪ್ರದೇಶ ರಾಜ್ಯದ ನೀಮಚ್ ಎಂಬ ಕೆಲವು ಭಾಗಗಳಲ್ಲಿ ‘ಗೀಲನ್ ಬಾ ಸಿಂಡ್ರೋಮ್’ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದ್ದು, ಈ ವರೆಗೆ ಆ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜೆಬಿಎಸ್ ಅಂತಲೂ ಕರೆಯಿಸಿಕೊಳ್ಳುವ ಈ ರೋಗ ಮಾನಸ ಎಂಬ ಪಟ್ಟಣದಲ್ಲಿ ೧೨ ನರಿಗೆ ಕಾಣಿಸಿಕೊಂಡಿದೆ. ಅಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲು ಹಾಗೂ ಆಸ್ಪತ್ರೆಗಳಲ್ಲಿ ವಿಶೇಷ ವರ‍್ಡ್ ಸ್ಥಾಪಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ ರಾಜ್ಯದ ಉಪ ಮೂಖ್ಯಂತ್ರಿ ಹಾಗೂ ಆರೋಗ್ಯ ಸಚಿವ ರಾಜೇಂದ್ರ ಶುಕ್ಲಾ ಅವರು ಪಟ್ಟಣಕ್ಕೆ ಭೆಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ‘ಗೀಲನ್ ಬಾ ಸಿಂಡ್ರೋಮ್’ ಗೆ ಇಬ್ಬರು ಬಲಿ




