ಬೆಂಗಳೂರು : ಇನ್ಮುಂದೆ ಸೋನುನಿಗಮ್ ನಿಂದ ಕನ್ನಡ ಹಾಡು ಹಾಡಿಸಲ್ಲ, ಯಾವುದೇ ಕಾರ್ಯಕ್ರಮ ನಡೆಸಲ್ಲ ಎಂದು ಫಿಲಂಚೇಂಬರ್ ನಿರ್ಧರಿಸಿದೆ.ಬೆಂಗಳೂರಿನ ಫಿಲಂಚೇಂಬರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಫಿಲಂಚೇಂಬರ್ ಅಧ್ಯಕ್ಷ ನರಸಿಂಹಲು ಈ ಬಗ್ಗೆ ಮಾತನಾಡಿದ್ದಾರೆ.
ಸೋನು ನಿಗಮ್ ಗೆ ಇನ್ನೂ ತಪ್ಪಿನ ಬಗ್ಗೆ ಅರಿವಾಗಿಲ್ಲ, ಕ್ಷಮೆಯಾಚಿಸಿಲ್ಲ. ಇನ್ಮುಂದೆ ಇನ್ಮುಂದೆ ಸೋನುನಿಗಮ್ ನಿಂದ ಕನ್ನಡ ಹಾಡು ಹಾಡಿಸಲ್ಲ, ಯಾವುದೇ ಕಾರ್ಯಕ್ರಮ ನಡೆಸಲ್ಲ ಎಂದು ಫಿಲಂಚೇಂಬರ್ ನಿರ್ಧರಿಸಿದೆ.ಈ ಮೂಲಕ ಖ್ಯಾತ ಗಾಯಕ ಸೋನು ನಿಗಮ್ ಗೆ ಬ್ಯಾನ್ ಬಿಸಿ ತಟ್ಟಿದೆ.
ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಖ್ಯಾತ ಗಾಯಕ ಸೋನು ನಿಗಮ್ ಗೆ ಬೆಂಗಳೂರು ಪೊಲೀಸರು ನೋಟಿಸ್ ನೀಡಿದ್ದಾರೆ. ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಖ್ಯಾತ ಗಾಯಕ ಸೋನು ನಿಗಮ್ ಗೆ ನೋಟಿಸ್ ನೀಡಿದ್ದಾರೆ.
ಇಮೇಲ್, ರಿಜಿಸ್ಟರ್ ಪೋಸ್ಟ್ ಮೂಲಕ ಬೆಂಗಳೂರಿನ ಆವಲಹಳ್ಳಿ ಪೊಲೀಸರು ನೋಟಿಸ್ ರವಾನೆ ಮಾಡಿದ್ದಾರೆ. ಸೋನು ನಿಗಮ್ ನನ್ನು ಬಂಧಿಸುವಂತೆ ಕನ್ನಡ ಪರ ಸಂಘನೆಗಳು ಪಟ್ಟು ಹಿಡಿದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿವಾದಾತ್ಮಕ ಹೇಳಿಕೆಗಾಗಿ ಗಾಯಕ ಸೋನು ನಿಗಮ್ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. .ಕರ್ನಾಟಕ ರಕ್ಷಣಾ ವೇದಿಕೆ ನೀಡಿದ ದೂರಿನ ಮೇರೆಗೆ ನಗರದ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸೆಕ್ಷನ್ 352 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸೋನು ನಿಗಮ್ ಅವರು ಕನ್ನಡ ಮತ್ತು ಕನ್ನಡಿಗರ ಭಾಷಾ ಹೋರಾಟವನ್ನು ಭಯೋತ್ಪಾದನೆಗೆ ಹೋಲಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್ವಿ) ಬೆಂಗಳೂರು ಪೊಲೀಸರಿಗೆ ಔಪಚಾರಿಕ ದೂರು ನೀಡಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.




