Ad imageAd image

ಎಸ್ ಐ ಒ ದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ

Bharath Vaibhav
ಎಸ್ ಐ ಒ ದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ
WhatsApp Group Join Now
Telegram Group Join Now

ಇಳಕಲ್:- ನಗರದ ಇಬ್ರಾಹಿಂ ಮಸ್ಜೀದ ಆವರಣದಲ್ಲಿ ಸ್ಟುಡೆಂಟ ಇಸ್ಲಾಮಿಕ್ ಆರ್ಗನೈಜೇಷನ್ ಇಳಕಲ್ ಘಟಕದ ವತಿಯಿಂದ ತಾಲೂಕಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶಾಲಾ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳಿಗೂ ಹೃತ್ಪೂರ್ವಕವಾಗಿ ಗೌರವಿಸಿ ಸನ್ಮಾನಿಸಲಾಯಿತು.ಚಿತ್ತರಗಿ ಶ್ರೀ ಮಠದ ಗುರು ಮಹಾಂತ ಶ್ರೀಗಳು ಗೌರವಿಸಿ ಸತ್ಕರಿಸಿದರು.

ಕಾರ್ಯಕ್ರಮವನ್ನು ಸಸಿಗೆ ನೀರು ಹಾಕಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಅಧ್ಯಕ್ಷ ವೆಂಕಟೇಶ ಸಾಕಾ ಮಾತನಾಡಿ ಶಿಕ್ಷಣ ನೀಡಿದ ಗುರುಗಳಿಗೂ ಹಾಗೂ ತಂದೆ ತಾಯಿಗಳಿಗೆ ಹೆಸರು ತರುವ ಮೂಲಕ ನಾಡಿನ ಕೀರ್ತಿ ಪತಾಕೆಯನ್ನು ಇನ್ನೂ ಹೆಚ್ಚಿನ ಉನ್ನತ ಶಿಕ್ಷಣ ಪಡೆಯಬೇಕೆಂದು ಕರೆ ನೀಡಿದರು.ವೇದಿಕೆಯಲ್ಲಿ ಮೆಹೆಬೂಬ ಅಲಂ ಬಡಗನ ಎಸ್ ಐ ಒ ಅಧ್ಯಕ್ಷ ಅಹಮ್ಮದ್ ಕೊತ್ವಾಲ್, ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!