ಬಳ್ಳಾರಿ: ಲಂಚದ ಹಣಕ್ಕೆ ಬೇಡಿಕೆ ಇಟ್ಟ ಹಾಗೂ ಸರಕಾರಿ ಕೆಲಸವನ್ನು ಮಾಡಿಕೊಡುವಲ್ಲಿ ವಿಳಂಭ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಸಿರುಗುಪ್ಪ ತಾಲೂಕು ತಹಸೀಲ್ದಾರ ಹೆಚ್. ವಿಶ್ವನಾಥ ಲೋಕಾಯುಕ್ತ ಬಲೆ ಬಿದ್ದಿದ್ದಾರೆ.
ರಾಯಚೂರಿನ ಸಮಾಜ ಸೇವಕ ಮಹಾಂತೇಶ್ ಎನ್ನುವವರು ನೀಡಿದ್ದ ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಏ.22 ರಂದು ದಾಳಿ ಮಾಡಿ, ಲಂಚದ ಹಣ ಪಡೆಯುತ್ತಿದ್ದಾಗ ಬಂಧಿಸಿದ್ದಾರೆ. 3.50 ಲಕ್ಷ ರೂ ಲಂಚದ ಬೇಡಿಕೆ ಇಟ್ಟಿದ್ದ ತಹಸೀಲ್ದಾರ ವಿಶ್ವನಾಥ, ಮುಂಗಡವಾಗಿ 1.50 ಲಕ್ಷ ರೂ.ಗಳನ್ನು ಪಡೆದಿದ್ದು, ಉಳಿದ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.