Ad imageAd image

ತಿಮರೋಡಿ’ ಮನೆಯಲ್ಲಿ ‘SIT’ ತಂಡ ಶೋಧ : 3 ತಲ್ವಾರ್ ಗಳು ಪತ್ತೆ

Bharath Vaibhav
ತಿಮರೋಡಿ’ ಮನೆಯಲ್ಲಿ ‘SIT’ ತಂಡ ಶೋಧ : 3 ತಲ್ವಾರ್ ಗಳು ಪತ್ತೆ
WhatsApp Group Join Now
Telegram Group Join Now

ಬೆಳ್ತಂಗಡಿ : ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ’ ಮನೆಯಲ್ಲಿ ‘SIT’ ಅಧಿಕಾರಿಗಳು ಶೋಧ ನಡೆಸಿದ್ದು, 3 ತಲ್ವಾರ್ ಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮಹೇಶ್ ತಿಮರೋಡಿ ಪತ್ನಿ, ಮಗ ಹಾಗೂ ಮಗಳ ಮೊಬೈಲ್ ಹಾಗೂ ಕೆಲವು ದಾಖಲೆಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಶೋಧ ನಡೆಸುವ ವೇಳೆ 3 ತಲ್ವಾರ್ ಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅದೇ ರೀತಿ ಸಿಸಿಟಿವಿ ಹಾರ್ಡ್ ಡಿಸ್ಕ್ ಸೇರಿ ಹಲವು ವಸ್ತುಗಳನ್ನು ಎಸ್ ಐ ಟಿ ಜಪ್ತಿ ಮಾಡಿಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ’ ಮನೆಗೆ ಮಾಸ್ಕ್’ ಮ್ಯಾನ್ ಚಿನ್ನಯ್ಯನನ್ನು ಕರೆತಂದು ನಿನ್ನೆ ಎಸ್ ಐ ಟಿ ತೀವ್ರ ಶೋಧ ನಡೆಸಿದೆ.ಮಹೇಶ್ ತಿಮರೋಡಿ ಮನೆಯಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆಯಾಗಿದ್ದು, ಅದನ್ನ ಎಸ್ ಐ ಟಿ ವಶಕ್ಕೆ ಪಡೆದುಕೊಂಡಿದೆ.

ಹಾಗೂ ತಿಮರೋಡಿ ಮನೆಯಲ್ಲಿದ್ದ ಹಾರ್ಡ್ ಡಿಸ್ಕ್ ಹಾಗೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ದೂರುದಾರ ಚಿನ್ನಯ್ಯ ಈ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ತಂಗಿದ್ದನು. ಈ ಹಿನ್ನೆಲೆ ಚಿನ್ನಯ್ಯನ್ನು ಕರೆದುಕೊಂಡು ಬಂದು ಎಸ್ ಐ ಟಿ ಶೋಧ ನಡೆಸಿದೆ. ಚಿನ್ನಯ್ಯ ತಂಗಿದ್ದ ರೂಂನಲ್ಲಿ ಎಸ್ ಐ ಟಿ ತೀವ್ರ ಶೋಧ ನಡೆಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!