ಪಟ್ಟಣದಲ್ಲಿ ಹೊಸ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

Bharath Vaibhav
ಪಟ್ಟಣದಲ್ಲಿ ಹೊಸ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
WhatsApp Group Join Now
Telegram Group Join Now

ಪಾವಗಡ: ಪಾವಗಡ ಪಟ್ಟಣದಲ್ಲಿ ಕೆ.ಎಸ್‌.ಆರ್‌.ಟಿ.ಸಿ. ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಧ್ಯಾಹ್ನ ಹಳೆ ಸಂತೆ ಮೈದಾನದವನು ಪರಿಶೀಲನೆ ನಡೆಸಲಾಯಿತು. ಈ ವೇಳೆ ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ಮಾಜಿ ಸಚಿವ ವೆಂಕಟರಮಣಪ್ಪ, ಚಿತ್ರದುರ್ಗ ಜಿಲ್ಲಾ ನಿಯಂತ್ರಕ ಶ್ರೀನಿವಾಸ್, ತುಮಕೂರು ಜಿಲ್ಲಾ ಕೆಎಸ್‌ಆರ್‌ಟಿಸಿ ನಿಯಂತ್ರಕ ಚಂದ್ರಶೇಖರ್, ಪುರಸಭಾ ಅಧ್ಯಕ್ಷ ಪಿ.ಎಚ್. ರಾಜೇಶ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದರು.

ಪರಿಶೀಲನೆ ನಂತರ ಮಾತನಾಡಿದ ಮಾಜಿ ಸಚಿವ ವೆಂಕಟರಮಣಪ್ಪ, ” ಹಲವಾರು ವರ್ಷಗಳಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಸೂಕ್ತ ಜಾಗವನ್ನು ಹುಡುಕಲಾಗುತ್ತಿತ್ತು ಆದರೆ ಸ್ಥಳದ ಅಭಾವದಿಂದ ಪಾವಗಡ ಪಟ್ಟಣದ ಸಮೀಪದಲ್ಲಿ ಎಲ್ಲೂ ಜಾಗ ಸಿಕ್ಕಿರಲಿಲ್ಲ ಶಿರಾ ರಸ್ತೆಯ ಮಾರ್ಗದ ಹಳೆ ಸಂತೆ ಮೈದಾನವು ಈಗ ವ್ಯರ್ಥವಾಗಿದೆ ,ಈ ಸ್ಥಳವನ್ನು ಬಸ್ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದು, ಅತ್ಯುತ್ತಮ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಹಾಗೂ ಶನಿ ಮಹಾತ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸುಲಭ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು,” ಎಂದು ತಿಳಿಸಿದರು.

ಶಾಸಕ ಹೆಚ್.ವಿ. ವೆಂಕಟೇಶ್ ಮಾತನಾಡಿ, ಪಾವಗಡ ಪಟ್ಟಣದಲ್ಲಿ ಕೆಎಸ್ಆರ್ಟಿಸಿ ಡಿಪೋ ಪ್ರಾರಂಭಿಸಿ 10 ವರ್ಷಗಳು ಕಳೆದಿವೆ ಅದರೆ ಇಲ್ಲಿವರೆಗೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣವಾಗಿರಲಿಲ್ಲಾ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ, ಸಾರಿಗೆ ಬಸ್ಸುಗಳು ನಿಂತು ಅಲ್ಲಿಂದ ರಾಜ್ಯದ ಬೇರೆ ಕಡೆ ಪ್ರಯಾಣಿಸಬೇಕಾಗಿತ್ತು. ಆದರೆ ಇದರಿಂದ ಸ್ಥಳದ ಕೊರತೆಯಾಗಿ ಅವ್ಯವಸ್ಥೆ ಹೆಚ್ಚಾಗುತ್ತಿದ್ದು .ಇದನ್ನು ಮನಗಂಡು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಜಾಗ ಹುಡುಕಲಾಗುತ್ತಿತ್ತು , ಕೊನೆಗೂ ಹಳೆ ಸಂತೆ ಮೈದಾನವನ್ನು ಆಯ್ಕೆ ಮಾಡಲಾಗಿದೆ, ಅಲ್ಲದೆ ಪಾವಗಡ ಘಟಕವನ್ನು ಚಿತ್ರದುರ್ಗ ವಿಭಾಗದಿಂದ ತುಮಕೂರು ವಿಭಾಗಕ್ಕೆ ವರ್ಗಾಯಿಸಲು ಬೋರ್ಡ್ ಮೀಟಿಂಗ್‌ನಲ್ಲಿ ಪ್ರಸ್ತಾಪಿಸುತ್ತೇವೆ. ಶೀಘ್ರದಲ್ಲೇ ಪಾವಗಡದ ಜನರು ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು

ಹಳೆಯ ಸಂತೆ ಮೈದಾನದಲ್ಲಿರುವ, ಯು. ಕಾಂಪ್ಲೆಕ್ಸ್ ಕಟ್ಟಡಗಳನ್ನು ಶಿಥಿಲಗೊಳಿಸಿ, ಆ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ಆರಂಭಿಸಲಾಗುವುದು. ಅಲ್ಲದೇ, ಇಂದಿರಾ ಕ್ಯಾಂಟೀನ್ ಅನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು ತಹಸೀಲ್ದಾರ್ ಡಿ.ಎನ್. ವರದರಾಜ್ ಅವರಿಗೆ ಕರೆ ಮೂಲಕ ಸರ್ವೇ ನಡೆಸಲು ಸೂಚಿಸಿದರು.

ಈ ಪರಿಶೀಲನಾ ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಜಾಫರ್ ಷರೀಫ್, ಅರ್‌.ಐ. ರಾಜಗೋಪಾಲ್, ಕೆ.ಎಸ್‌.ಆರ್‌.ಟಿ.ಸಿ. ಪಾವಗಡ ಡಿಪೋ ಮ್ಯಾನೇಜರ್ ಹನುಮಂತರಾಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಎಸ್. ಸುದೇಶ್ ಬಾಬು ಪುರಸಭಾ ಸದಸ್ಯರಾದ ಕಲ್ಪವೃಕ್ಷ ರವಿ ,ಮಹಮದ್ ಇಮ್ರಾನ್ , ಸೇರಿದಂತೆ ಇತರೆ ಪುರಸಭಾ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರುಗಳು ಹಾಜರಿದ್ದರು.
ವರದಿ ಪಾವಗಡ ಸುರೇಶ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!