Ad imageAd image

ಕೆ .ತಾಂಡ ಗ್ರಾಮದಲ್ಲಿಸೀತ್ಲಾ ಹಬ್ಬ ಆಚರಣೆ

Bharath Vaibhav
ಕೆ .ತಾಂಡ ಗ್ರಾಮದಲ್ಲಿಸೀತ್ಲಾ ಹಬ್ಬ ಆಚರಣೆ
WhatsApp Group Join Now
Telegram Group Join Now

ಸಿರುಗುಪ್ಪ: ತಾಲೂಕು ಕೆಂಚನಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆ.ತಾಂಡ ಗ್ರಾಮದಲ್ಲಿ ಸೀತ್ಲಾ ಹಬ್ಬವನ್ನು ಮಂಗಳವಾರ ಬಂಜಾರ ಸಮುದಾಯದವರು ಸಂಭ್ರಮದಿಂದ ಆಚರಿಸಿದರು.

ಸುಮಾರು 450 ಕ್ಕೂ ಹೆಚ್ಚು ಕುಟುಂಬಗಳು ಪಾಲ್ಗೊಂಡು,ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಆಚರಣೆ : ಊರ ಹೊರಗಿನ ಬೇವಿನಮರದ ಬುಡದಲ್ಲಿ ಏಳು ಮಾತೆಯರನ್ನು ಪ್ರತಿಬಿಂಬಿಸುವ ಮರದ ಏಳು ಕೊಂಬೆಯ ತುಂಡುಗಳನ್ನೋ ಇಲ್ಲವೇ, ಏಳು ಕಲ್ಲುಗಳಿಗೆ ಊರಮಂಜ ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡುವುದುಮಾತೆಯರ ಪ್ರತಿಬಿಂಬ ಹಿಂದೆ ‘ಲೂಕಡ್‌'(ಸೇವಕ)ನನ್ನು ಪ್ರತಿಷ್ಠಾಪಿಸಿರುತ್ತಾರೆ.

ಹರಕೆ ಹೊತ್ತ ಭಕ್ತರು ಲೂಕಡ್‌ಗೆ , ಪೂಜೆ ಹಾಗೂ ಮಾತೆಯರಿಗೆ ಸಿಹಿ ಭೋಜನದ ಎಡೆ ಹಾಗೂ ಪೂಜೆ ಸಲ್ಲಿಸಿ ಭಕ್ತಿ ಮೆರೆಯುತ್ತಾರೆ.

ಸೀತ್ಲಾ ಹಬ್ಬ ಹಿನ್ನೆಲೆ:ಪುತ್ರ ಸಂತಾನಯಿಲ್ಲದ್ದರಿಂದ ಜಿಗುಪ್ಸೆಗೊಂಡು ಭೀಮಾನಾಯ್ಕ ಮಕ್ಕಳ ಸಂತಾನ ಪ್ರಾಪ್ತಿಗೆ ಕಠಿಣ ತಪಸ್ಸಿಗೆ ಕುಳಿತ್ತಿದ್ದ ವೇಳೆ ಏಳು ಮಂದಿ ಮಾತೆಯರು ಸೂರಗೊಂಡನಕೊಪ್ಪದ ಸಮೀಪದ ಚಿನ್ನಿಕಟ್ಟೆ ಹೊಂಡದಲ್ಲಿ ಸ್ನಾನಕ್ಕೆ ಇಳಿದಿದ್ದರಂತೆ, ಸ್ನಾನದ ವೇಳೆ ಮೈಉಜ್ಜುವಾಗ ಕಾಣಿಸಿಕೊಂಡ ಮಣ್ಣಿನ್ನು ಮಾತ್ರೆಗಳಂತೆ ಉಂಡೆ ಮಾಡಿ, ತಪಸ್ವಿ ಭೀಮಾನಾಯ್ಕನ ಪತ್ನಿ ಧರ್ಮಿಬಾಯಿಗೆ ಸೇವಿಸಲು ನೀಡಿದ್ದರಂತೆ, ಈ ಮಾತ್ರೆ ಸೇವಿಸಿದ ಪರಿಣಾಮ ಉದಯಿಸಿದ ಮಹಾಮಹಿಮನೇ ಸೇವಾಲಾಲ್‌ ಎಂಬುದು ಬಂಜಾರ ಸಮುದಾಯದಲ್ಲಿ ಪ್ರತೀತಿ ಇದೆ .

ಮಕ್ಕಳಿಗೆ ಕಾಣಿಸಿಕೊಳ್ಳುವ ಮೈಲಮ್ಮ, ದಡಾರ, ಕಣ್ಣುಬೇನೆ ಹಾಗೂ ಪ್ಲೇಗ್‌ ಮಾರಕ ಸಾಂಕ್ರಾಮಿಕ ರೋಗಗಳು ಬರಬಾರದೆಂದು ತಾಂಡಗಳಲ್ಲಿ ಬಂಜಾರ(ಲಂಬಾಣಿ) ಸಮುದಾಯದವರು ಪ್ರತಿವರ್ಷ ಸೀತ್ಲಾ ಹಬ್ಬ ಆಚರಿಸುತ್ತಾರೆ.

ಇದೇ ವೇಳೆ ಊರಿನ ಮುಖಂಡರಾದ ಮೋತಿ ನಾಯ್ಕ. ಸುಂಕ ನಾಯ್ಕ. ಸಣ್ಣ ಕಾಳಪ್ಪ. ವೆಂಕೋಬ ನಾಯ್ಕ. ಮುನ್ನ ನಾಯ್ಕ. ರಾಜಣ್ಣ ನಾಯ್ಕ. ಶ್ರೀನಿವಾಸ ನಾಯ್ಕ. ಪಾಂಡು ನಾಯ್ಕ ಊರಿನ ಇತರೆ ಮುಖಂಡರು ಹಾಜರಿದ್ದರು.

ವರದಿ :ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!