ಶಿಗ್ಗಾಂವಿ : ಹೌದು ಶಿಗ್ಗಾಂವಿ ಪಟ್ಟಣದ ಹೊಂಡಾ ಶೋ ರೂಂ ಬಳಿ ಶಿವಾನಂದ ಕುನ್ನೂರ ಎಂಬ ವ್ಯಕ್ತಿಯ ಮೇಲೆ ಹಾಡಹಗಲೇ ಮಾರಕಾಸ್ತ್ರಗಳಿಂದ ಅಟ್ಯಾಕ್ ನಡೆದಿದ್ದು ಜನಸಾಮಾನ್ಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಮಟ ಮಟ ಮಧ್ಯಾಹ್ನವೇ ಮರ್ಡರ್ : ಮಟ ಮಟ ಮಧ್ಯಾಹ್ನವೇ ಜನಸಂದಣಿ ಇರುವ ಪ್ರದೇಶದಲ್ಲೇ ಹಾಡಹಗಲೇ ಮಾರಕಾಸ್ತ್ರಗಳಿಂದ ಅಟ್ಯಾಕ್ ನಡೆದಿರುವ ಪರಿಣಾಮ ಶಿವಾನಂದ ಕುಣ್ಣೂರು ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ಇಂದು ನಡೆದಿದೆ.
ಹಾವೇರಿಯಲ್ಲಿ ಹೆಚ್ಚಿದ ಪುಡಿ ರೌಡಿಗಳ ಪುಂಡಾಟ: ಇತ್ತೀಚಿನ ದಿನಮಾನಗಳಲ್ಲಿ ಹಾವೇರಿ ಜಿಲ್ಲೆಯಾದ್ಯಂತ ಹೆಚ್ಚಿದ ಹಲ್ಲೆಗಳು ಹಾಗೂ ಹತ್ಯೆ ಪ್ರಕರಣಗಳನ್ನು ಗಮನಿಸಿದರೆ ಪುಂಡರು ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬ ಗುಸು ಗುಸು ಚರ್ಚೆಗಳು ಸಹ ಸಾರ್ವಜನಿಕ ವಲಯದಲ್ಲಿ ಓಡಾಡ್ತಾ ಇವೆ.
ಸದ್ಯ ಸ್ಥಳಕ್ಕೆ ಆಗಮಿಸಿದ ಶಿಗ್ಗಾಂವಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹಾಗೂ ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬುದು ಇಲ್ಲಿವರೆಗೂ ತಿಳಿದು ಬಂದಿರುವುದಿಲ್ಲ.
ವರದಿ : ನಾಗರಾಜ ವನಳ್ಳಿ




