Ad imageAd image

ಕುಸಿದ ಸೇತುವೆ : ಆರು ಮಂದಿ ಸಾವು, ನೀರಲ್ಲಿ ಕೊಚ್ಚಿ ಹೋದ 25 ರಿಂದ 30 ಜನ

Bharath Vaibhav
ಕುಸಿದ ಸೇತುವೆ : ಆರು ಮಂದಿ ಸಾವು, ನೀರಲ್ಲಿ ಕೊಚ್ಚಿ ಹೋದ 25 ರಿಂದ 30 ಜನ
WhatsApp Group Join Now
Telegram Group Join Now

ಮಹಾರಾಷ್ಟ್ರ: ರಾಜ್ಯದಲ್ಲಿ ನಿರಂತವಾಗಿ ಮಳೆಯಾಗುತ್ತಿದೆ. ಈ ಮಳೆಯ ಪರಿಣಾಮವಾಗಿ ಇಂದ್ರಯಾಣಿ ನದಿಗೆ ನಿರ್ಮಿಸಲಾದ ಸೇತುವೆ ಕುಸಿತಗೊಂಡಿದೆ.

ಈ ಕಾರಣದಿಂದಾಗಿ ಆರು ಮಂದಿ ಸಾವನ್ನಪ್ಪಿದ್ದರೇ, 25 ರಿಂದ 30 ಪ್ರವಾಸಿಗರು ನೀರಲ್ಲಿ ಕೊಚ್ಚಿ ಹೋಗಿದ್ದಾರೆ.

ಭಾನುವಾರದ ಇಂದು ಭಾರೀ ಸಂಖ್ಯೆಯ ಪ್ರವಾಸಿಗರು ಇಂದ್ರಯಾಣಿ ಸೇತುವೆ ಬಳಿ ಜಮಾಯಿಸಿದ್ದರು.

ಈ ವೇಳೆ ಸೇತುವೆ ಕುಸಿತಗೊಂಡು ಭಾರಿ ದುರಂತ ಸಂಭವಿಸಿದೆ. ಇಂದುವರೆಗೆ 6 ಪ್ರವಾಸಿಗರ ಮೃತದೇಹ ಪತ್ತೆಯಾಗಿದ್ದು, ಉಳಿದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮಹಾರಾಷ್ಟ್ರದ ಪುಣೆಯ ಮಾವಲ್ ತಾಲ್ಲೂಕಿನ ಕುಂದಮಾಲದಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು 25-30 ಪ್ರವಾಸಿಗರು ನದಿಗೆ ಬಿದ್ದ ಘಟನೆ ನಡೆದಿದೆ.

ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಏರಿದೆ. ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!