ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ವರಲಕ್ಷ್ಮಿ ಶರತ್ ಕುಮಾರ್ ಅವರು ಕನ್ನಡದ ಸಿನಿಮಾಗಳಲ್ಲೂ ನಟಿಸಿ ಜನಮನ ಗೆದ್ದಿದ್ದಾರೆ. ಕನ್ನಡದ ಮಾಣಿಕ್ಯ ಹಾಗೂ ಇತ್ತೀಚೆಗೆ ತೆರೆಕಂಡ ಮ್ಯಾಕ್ಸ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಚಿತ್ರರಂಗದಲ್ಲಿ ನಟಿಯರಿಗೆ ಲೈಂಗಿಕ ದೌರ್ಜನ್ಯ, ಕಿರುಕುಳ, ಕಾಸ್ಟಿಂಗ್ ಕೌಚ್ ಆರೋಪಗಳು ಆಗಾಗ ಕೇಳಿಬರುತ್ತಲೇ ಇವೆ. ಈ ಬಗ್ಗೆ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ಕೂಡ ಶಾಕಿಂಗ್ ವಿಚಾರಗಳನ್ನ ರಿವೀಲ್ ಮಾಡಿದ್ದಾರೆ.
ತಮ್ಮ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಅವರು ವೇದಿಕೆ ಮೇಲೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ತಮಿಳು ಸಿನಿಮಾಗಳಿಂದ ಚಿತ್ರರಂಗಕ್ಕೆ ಕಾಲಿಟ್ಟ ಅವರು ಬಳಿಕ ತೆಲಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ್ದಾರೆ. ಅಲ್ಲದೆ ವರಲಕ್ಷಿ ಅವರು ಮೂಲತಃ ಸಿನಿರಂಗದ ಕುಟುಂಬದ ಹಿನ್ನೆಲೆಯಿಂದಲೇ ಬಂದವರು. ಇಷ್ಟಾಗಿಯೂ ಅವರ ಮೇಲೂ ಲೈಂಗಿಕ ಕಿರುಕುಳ ನಡೆದಿದೆ ಎಂಬ ವಿಚಾರ ಎಂತವರಿಗೂ ನಿಜಕ್ಕೂ ಶಾಕ್ ನೀಡಿದೆ. ಅಮಾಯಕ ಹೆಣ್ಣುಮಕ್ಕಳ ಮೇಲೆ ಚಿತ್ರರಂಗದಲ್ಲಿ ಈ ರೀತಿಯ ಕೃತ್ಯಗಳು ನಡೆಯುತ್ತವೆ ಎಂಬ ದೂರು ಮೊದಲಿನಿಂದಲೂ ಇದೆ.
ಇದೀಗ ನಟಿ ವರಲಕ್ಷ್ಮಿ ಅವರ ಮೇಲೂ ಲೈಂಗಿಕ ಶೋಷಣೆ ನಡೆದಿರುವ ಆಘಾತಕಾರಿ ವಿಚಾರವನ್ನು ಅವರೇ ಬಹಿರಂಗಪಡಿಸಿದ್ದಾರೆ. ತಮಿಳಿನ ಡ್ಯಾನ್ಸ್ ಜೋಡಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯೊಬ್ಬರು ಲೈಂಗಿಕ ದೌರ್ಜನ್ಯದ ವಿಚಾರವಾಗಿ ಮಾಡಿದ ಅಭಿನಯ ಕಂಡು ಕಣ್ಣೀರಿಟ್ಟ ನಟಿ, ತಮ್ಮ ಜೀವನದಲ್ಲಿ ಆದ ಕರಾಳ ಘಟನೆಯನ್ನು ಎಲ್ಲರೆದುರು ಹೇಳಿಕೊಂಡಿದ್ದಾರೆ.
ವೇದಿಕೆಯಲ್ಲಿ ಮೇಲೆ ಅಭಿನಯಿಸಿದ ಕಥೆ ನನ್ನ ಜೀವನದ ನಿಜವಾದ ಘಟನೆ ಎಂದು ವರಲಕ್ಷ್ಮಿ ಹೇಳಿಕೊಂಡಿದ್ದಾರೆ. ನನ್ನ ಜೀವನದಲ್ಲೂ ಇದೇ ಘಟನೆ ನಡೆಯಿತು ಎಂದು ಗಳಗಳನೆ ಬಿಕ್ಕಳಿಸಿ ಅತ್ತಿದ್ದಾರೆ. “ನಿಮ್ಮ ನೋವು ಏನು ಎನ್ನುವುದು ನನಗೆ ಗೊತ್ತು. ಏಕೆಂದರೆ ನನ್ನ ಜೀವನದಲ್ಲಿ ನಡೆದಿದ್ದು ಕೂಡ ಇದೇ. ನನ್ನ ಪೋಷಕರು ಕೆಲಸದಲ್ಲಿ ಬ್ಯುಸಿಯಾಗಿರುತ್ತಿದ್ದರು. ಹಾಗಾಗಿ ಬಾಲ್ಯದಲ್ಲಿ ನನ್ನನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದರು.
ಕೆಲವು ದಿನಗಳ ಕಾಲ ನನ್ನನ್ನು ಸಂಬಂಧಿಕರ ಮನೆಗೂ ಕಳಿಸಿದ್ದರು. ಆಗ ಸುಮಾರು ಆರು ಮಂದಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂಬ ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಧಾರಾವಾಹಿ ನಿಲ್ಲಿಸಿ ಎಂದ ವೀಕ್ಷಕರು” ಪೋಷಕರು ದಯವಿಟ್ಟು ನಿಮ್ಮ ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಚಿಕ್ಕಂದಿನಿಂದಲೇ ಹೇಳಿಕೊಡಿ.
ಮಕ್ಕಳಿಗೆ ಇದರ ಅರಿವು ತುಂಬಾ ಮುಖ್ಯ ಎಂದು ನಟಿ ವರಲಕ್ಷ್ಮಿ ಅವರು ಪೋಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಖ್ಯಾತ ಸಿನಿಮಾ ಕುಟುಂಬದಲ್ಲಿ ಹುಟ್ಟಿದ ನಟಿಯನ್ನೂ ಲೈಂಗಿಕ ದೌರ್ಜನ್ಯ ಬಿಟ್ಟಿಲ್ಲವಲ್ಲ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಅವರ ಸಂಬಂಧಿಕರ ಮನೆಯಲ್ಲೇ ಇಂತಹ ನೀಚ ಕೃತ್ಯ ನಡೆದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಕಂಬನಿ ಮಿಡಿದಿದ್ದಾರೆ.