ಯಳಂದೂರು: ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಮೂರು ದಿನಗಳ ಕಾಲ YPL ಮೊದಲ ಆವೃತಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಈ ಪಂದ್ಯಾವಳಿಯಲ್ಲಿ ಹಲವು ತಂಡಗಳು ಭಾಗವಹಿಸಿದವು.ಫೈನಲ್ ನಲ್ಲಿ ಯಳಂದೂರಿನ ಸ್ಕೈ ಕಿಂಗ್ಸ್ (SKY Kings) ತಂಡವು ಎದುರಾಳಿ ತಂಡ ಆಜಾದ್ ಎಲೆವೆನ್ ತಂಡವನ್ನು ಮಣಿಸಿ ಜಯಶೀಲರಾದರು.
ಅಜಾದ್ ಇಲೆವೆನ್ (AZAD ELEVEN) ಹಾಗು ಎಲೈಟ್ ಇಲೆವೆನ್ (ELITE ELEVEN) ತಂಡಗಳು ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ನಂತರ ಆಯೋಜಕರಾದ ಪ್ರತಾಪ್ ರವರು ಬಹುಮಾನ ವಿತರಣೆ ಮಾಡಿ ಪಂದ್ಯಗಳಲ್ಲಿ ಭಾಗವಹಿಸಿದ ಆಟಗಾರರನ್ನು ಉದ್ದೇಶಿಸಿ ಮಾತನಾಡಿ ಆಟಗಾರರಲ್ಲಿರುವ ಪ್ರತಿಭೆಯನ್ನು ಗುರುತಿಸಿ,ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ನಮ್ಮ ಸ್ಥಳೀಯ ಪ್ರತಿಭೆಗಳು ರಾರಾಜಿಸಬೇಕು.ಆಗಾಗಿ ನಂತರದ ದಿನಗಳಲ್ಲಿ ಇನ್ನಷ್ಟು ಆವೃತ್ತಿಗಳನ್ನು ನಡೆಸುವ ವಿಶ್ವಾಸ ವ್ಯಕ್ತಪಡಿಸಿ ಕ್ರೀಡಾ ಸ್ಪೂರ್ತಿ ಮೆರೆದರೆ.
ಪಟ್ಟಣದ ಸದಸ್ಯರಾದ ಮಹೇಶ್ ಮಾತನಾಡಿ ಆಟದಲ್ಲಿ ಸೋಲು ಗೆಲುವು ಸಹಜ, ಗೆದ್ದ ತಂಡಕ್ಕೆ ಶುಭಾಶಯ ಕೋರಿ ಸೋತ ತಂಡಗಳಿಗೆ ಮುಂದಿನ ಆವೃತ್ತಿಗಳಲ್ಲಿ ಇನ್ನು ಒಳ್ಳೆಯ ಪ್ರದರ್ಶನ ನೀಡಿ ಎಂದು ಕಿವಿಮಾತು ತಿಳಿಸಿದರು.
ನಂತರ ಪಟ್ಟಣದ ಯುವ ಮುಖಂಡ ರಘು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಕುಮಾರ್, ಹಿರಿಯ ಆಟಗಾರರಾದ ಯೋಗಿ, ಸತೀಶ್,ಸುನಿಲ್,ಬಂಕ್ ಅನಿಲ್ ಹಾಗೂ ಸ್ಕೈ ಕಿಂಗ್ಸ್ ತಂಡದ ಆಟಗಾರರಾದ ಕ್ಯಾಪ್ಟನ್ ಭರತ್, ಮಹೇಶ್,ಅಭಿಷೇಕ್, ಮನೋಜ್, ಪವನ್, ಸುದೀಪ್, ಮಹದೇವ್ ಪ್ರಸಾದ್, ಕೃಷ್ಣ,ವೀರು,ಪ್ರಕಾಶ್, ಚಂದು,ಮುರುಳಿ, ಪ್ರಮೋದ್ ಮತ್ತು ಇತರ ತಂಡಗಳ ಆಟಗಾರರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ