
ಚಿಕ್ಕೋಡಿ : ಚಿಕ್ಕೋಡಿ ಗಡಿ ಭಾಗದ ಜತ್ರಾಟ್, ಮಲಿಕವಾಡ, ಭೋಜ್, ಕಾರದಗಾ, ಕಲ್ಲೂಳ, ಸೌವದತ್ತಿ, ಮಾಂಜರಿ ಹಳೆಯ ಸೇತುವೆ,ಇನ್ನೂ ಹಲವು ಕೆಳಹಂತದ ಸೇತುವೆಗಳು ಈ ವರ್ಷದಲ್ಲಿ ಐದನೇ ಬಾರಿ ಮುಳುಗಡೆ ಗೊಂಡಿವೆ.
ಇದರಿಂದಾಗಿ ಕೆಳಹಂತದ ಸೇತುವೆಗಳನ್ನು ಸಂಚಾರಕ್ಕೆ ಒಳಗೊಂಡ ಗ್ರಾಮಗಳಿಗೆ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಅವುಗಳು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಇಂತಹ ಸಂದರ್ಭದಲ್ಲಿ ಎಮರ್ಜೆನ್ಸಿ ಎಂದು ಲೈನ್ಸ್ ವೈಕಲ್ ಯಾವುದು ಕೂಡ ಸಂಚರಿಸಲು ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಆದ್ದರಿಂದ ಡೆಲಿವರಿ ಪೇಷಂಟ್ ಎಮರ್ಜೆನ್ಸಿ ಅಪಘಾತ ಇಂತಹ ಸಂದರ್ಭಗಳಲ್ಲಿ ಪೇಷಂಟ್ಗಳನ್ನು ಆಸ್ಪತ್ರೆಗೆ ತಲುಪಿಸಲು ಬಹಳಷ್ಟು ಕಷ್ಟವಾಗುತ್ತಿದೆ.
ಈಗಾಗಲೇ ಈ ಗ್ರಾಮಗಳಿಗೆ ಸಂಬಂಧಪಟ್ಟಂತೆ ಕೆಲವು ಎತ್ತರ ಸೇತುವೆಗಳು ಅರ್ಧ ಕಾಮಗಾರಿ ಮಟ್ಟದಲ್ಲಿ ನಿಂತಿವೆ ಅವುಗಳನ್ನು ಬೇಗ ಪೂರ್ಣಗೊಳಿಸಿ, ಈ ಗ್ರಾಮಗಳಿಗೆ ಸಂಬಂಧಪಟ್ಟ ಜನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ ಕಾರಣ ಇದಕ್ಕೆ ಸಂಬಂಧಪಟ್ಟ ಶಾಸಕರು, ಸರ್ಕಾರಿ ಅಧಿಕಾರಿಗಳು, ಸಂಬಂಧಪಟ್ಟ ಗ್ರಾಮ ಅಭಿವೃದ್ಧಿ ಅಧಿಕಾರಿ, ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು, ಇತ್ತ ಕಡೆಗೆ ಗಮನ ಹರಿಸಿ ಸೇತುವೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಬೇಕಾಗಿದೆ.
ವರದಿ: ರಾಜು ಮುಂಡೆ




